ಆಯುಷ್ಮಾನ್ ಭಾರತ್ ರಾಜ್ಯದಲ್ಲಿ ಈ ತಿಂಗಳಿಂದ ಜ್ಯಾರಿ

ಕಾಸರಗೋಡು: 70 ವರ್ಷ ದಾಟಿದ ಎಲ್ಲರಿಗೂ ಉಚಿತವಾಗಿ ಐದು ಲಕ್ಷ ರೂ. ತನಕ ಚಿಕಿತ್ಸಾ ಧನ ಸಹಾಯ ನೀಡುವ ಕೇಂದ್ರ ಸರಕಾರದ ಮಹತ್ತರ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯದಲ್ಲಿ ಈ ತಿಂಗಳಿಂದ ಜ್ಯಾರಿಗೊಳಿಸಲಾಗುವುದು.

ಈ ಯೋಜನೆಯಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷದಷ್ಟು ಮಂದಿ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ‘ಕಾರುಣ್ಯ’ ಚಿಕಿತ್ಸಾ ಯೋಜನೆ ಪ್ರಕಾರ ಎಂ.ಪ್ಯಾನಲ್‌ನಲ್ಲಿ ಒಳಗೊಂಡಿರುವ ಎಲ್ಲಾ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಜ್ಯಾರಿಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. 70 ವರ್ಷ ದಾಟಿದ ಎಲ್ಲರೂ ಈ ಯೋಜನೆಯಲ್ಲಿ ಹೆಸರು ನೋಂದಾಯಿಸಬ ಹುದಾಗಿದೆ. ಇದಕ್ಕೆ ಯಾವುದೇ ರೀತಿಯ ಆದಾಯ ಮಿತಿ ಹೇರಲಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page