ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ: ವಿಜೇತರಿಗೆ ಬಹುಮಾನ ವಿತರಣೆ
ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಶನ್, ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಕ್ಲಬ್‌ನ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಚಾಲಿಂಗಾಲ್ ನಂಬ್ಯಾರಡ್ಕಂ ಇಂಡೋರ್ ಕೋರ್ಟ್‌ನಲ್ಲಿ ಜರಗಿದ ಸ್ಪರ್ಧೆಯಲ್ಲಿ ಜಿಲ್ಲೆಯ ೭ ತಂಡಗಳು ಭಾಗ ವಹಿಸಿತು. ಪಂದ್ಯಾಟದಲ್ಲಿ ರಾಜಪುರಂ ವಲಯದ ಮಹೇಶ್- ಸಲ್ವಿನ್ ತಂಡ ಪ್ರಥಮ ಸ್ಥಾನ ಹಾಗೂ ಕಾಞಂಗಾಡ್ ವಲಯದ ಸಜಿತ್- ವೈಶಾಖ್ ತಂಡ ದ್ವಿತೀಯ ಸ್ಥಾನ, ರಾಜಪುರಂ ವಲಯದ ಸಿಬಿ- ಬೆನ್ ಸೆಬಾಸ್ಟಿಯನ್ ತಂಡ ತೃತೀಯ ಸ್ಥಾನ ಪಡೆಯಿತು. ಸಂಘ ಟನೆಯ ಜಿಲ್ಲಾಧ್ಯಕ್ಷ ಸುಗುಣನ್ ಇರಿ ಯರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯ ದರ್ಶಿ ಹರೀಶ್ ಪಾಲಕುನ್ನು ಸಮಾರೋಪ ಸಮಾರಂಭ ಉದ್ಘಾಟಿಸಿ ದರು. ವಿಜೇತರಿಗೆ ಹರೀಶ್ ಪಾಲಕುನ್ನು, ರಾಜ್ಯ ಮಹಿಳಾ ವಿಂಗ್ ಕೋ-ಆರ್ಡಿನೇಟರ್ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಕೋಶಾಧಿಕಾರಿ ವಿವಿಧ ತಂಡಗಳಿಗೆ ಬಹು ಮಾನ ವಿತರಿಸಿದರು. ಕೆ.ಸಿ ಅಬ್ರ ಹಾಂ, ಅನಿಲ್ ಅಪ್ಪೂಸ್, ರೆನಿ ಚೆರಿ ಯಾನ್, ಸುರೇಶ್ ಬಿ.ಜೆ. ಶುಭ ಕೋರಿ ದರು. ಕ್ಲಬ್ ಕೋ-ಆರ್ಡಿನೇಟರ್ ರತೀಶ್ ಸ್ವಾಗತಿಸಿ, ಕಾಞಂಗಾಡ್ ವಲಯ ಕಾರ್ಯದರ್ಶಿ ಸುರೇಶ್ ವಂದಿಸಿದರು.