ಇರಾನ್-ಇಸ್ರೇಲ್ ಉದ್ವಿಗ್ನತೆ: ಅರ್ಮೇನಿಯಾ ಗಡಿ ದಾಟಿದ 100 ಭಾರತೀಯರು
ನವದೆಹಲಿ: ಇರಾನ್- ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ಅದರ ಪರಿಣಾಮ ಇರಾನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಪ್ರತ್ರಿಯೆ ಆರಂಭಿಸಲಾಗಿದೆ. ಇದರಂತೆ ಇರಾನ್ನಲ್ಲಿರುವ ಸುಮಾರು 100 ಭಾರತೀಯರ ಮೊದಲ ಬ್ಯಾಚನ್ನು ಅರ್ಮೇನಿಯಾ ಗಡಿ ದಾಟಿಸಲಾಗಿದೆ. ಟೆಹರಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭದ್ರತಾ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮತ್ತು ಇರಾನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದೆ. ಅವರನ್ನೂ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುವುದೆಂದು ರಾಯಭಾರಿ ಕಚೇರಿ ತಿಳಿಸಿದೆ.