ಈಡೇರಿದ ಆಗ್ರಹ: ತೆಲಂಗಾನ ಸಚಿವರಿಂದ ಕುಕ್ಕೆ ಕ್ಷೇತ್ರಕ್ಕೆ ಒಂದು ಕೋಟಿ ರೂ. ದೇಣಿಗೆ

ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ  ದೇವಸ್ಥಾನಕ್ಕೆ ತೆಲಂಗಾನದ ಕಂದಾಯ ಸಚಿವ ಒಂದು ಕೋಟಿ ರೂ. ದೇಣಿಗೆ ಸಮರ್ಪಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿ ತನ್ನ ಮನದಿಚ್ಛೆ ನೆರವೇರಿದರೆ ಒಂದು ಕೋಟಿ ರೂ. ನೀಡುವುದಾಗಿ ತಿಳಿಸಿದ್ದರು. ಅದರಂತೆ ಮೂರು ತಿಂಗಳೊಳಗೆ ಅವರ ಆಗ್ರಹ ಈಡೇರಿದ್ದು, ಅದರ ನೆನಪಿಗೆ ನಿನ್ನೆ ಕ್ಷೇತ್ರಕ್ಕೆ ತಲುಪಿ ಒಂದು ಕೋಟಿ ರೂ. ಸಮರ್ಪಿಸಿದ್ದಾರೆ. ಸಚಿವ ಶ್ರೀನಿವಾಸ ರೆಡ್ಡಿ ಅಂದು ತನ್ನ ಮಗಳಿಗೆ ಉತ್ತಮ ವರ ಲಭಿಸಬೇಕೆಂದು ಪ್ರಾರ್ಥಿಸಿದ್ದರು. ಮೂರು ತಿಂಗಳಲ್ಲೇ ಅವಳ ಮದುವೆ ಕೈಗೂಡಿದೆ. ಈ ಹಿನ್ನೆಲೆಯಲ್ಲಿ ದೇಣಿಗೆ ಸಮರ್ಪಿಸಿದ್ದಾರೆ.

You cannot copy contents of this page