ಕಾರಿನಲ್ಲಿ ಸಾಗಿಸುತ್ತಿದ್ದ 31ಕಿಲೋ ಗಾಂಜಾ ವಶ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಕಾಸರಗೋಡು: ಹೋಂಡಾ ಸಿಟಿ ಕಾರಿನಲ್ಲಿ ಸಾಗಿಸುತ್ತಿದ್ದ 31 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರ ಣದಲ್ಲಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಅಧಿಂಞ್ಞಾಲ್ ತೆಕ್ಕೇಪುರದ ಟಿ.ಎಂ. ಶಮೀರ್ (40), ನೀಲೇಶ್ವರ ಬಂಗಳಂ ಸೆಂಚುರಿ ಹೌಸ್‌ನ ಟಿ. ಶಂಸೀರ್ (32) ಎಂಬಿವರನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದಲ್ಲಿ  ಬಂಧಿಸಲಾಗಿದೆ. ಗಾಂಜಾ ಸಾಗಾಟ ಪ್ರಕರಣದಲ್ಲಿ ಮುಖ್ಯ ಆರೋಪಿಗಳಾದ ಬೇಕಲ ಪಳ್ಳಿಕ್ಕೆರೆ ಬಿಲಾಲ್‌ನಗರ ಸಮೀರ ಮಂಜಿಲ್‌ನ ಕಬೀರ್ ಯಾನೆ ಲಾಲಾ ಕಬೀರ್ (40), ಕಾಞಂಗಾಡ್ ಕೊವ್ವಲ್  ಆವಿಕ್ಕರದ ಸಜಿನಾ ಮಂಜಿಲ್ ನಿವಾಸಿ ಮೊಹಮ್ಮದ್ ಮಿರ್ಶಾನ್ (34) ಎಂಬಿವರನ್ನು  ತಕ್ಷಣ ಸೆರೆಹಿಡಿಯಲಾಗಿತ್ತು. ಜುಲೈ ೪ರಂದು ಬೆಳಿಗ್ಗೆ  ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಸಾ ಸಮೀಪ ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಈ ಇಬ್ಬರನ್ನು ಬಂಧಿಸಲಾಗಿತ್ತು. ಬಳಿಕ ರಿಮಾಂಡ್‌ಗೊಳಗಾದ ಆರೋಪಿ ಗಳನ್ನು ಕಸ್ಟಡಿಗೆ ತೆಗೆದು ತನಿಖೆಗೊಳ ಪಡಿಸಿದಾಗ ಮತ್ತಿಬ್ಬರು ಆರೋಪಿಗಳ ಕುರಿತು ಮಾಹಿತಿ ಲಭಿಸಿತ್ತೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page