ಕುಂಬಳೆ: ಕಯ್ಯಾರಿನ ಮನೆಯಿಂದ ಕಾಣೆಯಾದ ಚಿನ್ನಾಭರಣ ಮನೆ ಸಮೀಪವೇ ಪತ್ತೆಯಾಗಿದೆ. ಪಾಲಕ್ಕಾಡ್‌ನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಕಯ್ಯಾರಿನ ಯೂಸಫ್ ಎಂಬವರ ಮನೆಯಿಂದ ಆದಿತ್ಯವಾರ ರಾತ್ರಿ 5 ಪವನ್ ಚಿನ್ನಾಭರಣ ಕಳವಿಗೀಡಾಗಿ ರುವುದಾಗಿ ದೂರಲಾಗಿತ್ತು. ಯೂಸಫ್‌ರ ಪತ್ನಿ ಹಾಗೂ ಮೂವರು ಮಕ್ಕಳು ಮಾತ್ರವೇ ಮನೆಯಲ್ಲಿ ವಾಸಿಸುತ್ತಿ ದ್ದಾರೆ. ಇವರು ಆದಿತ್ಯವಾರ ರಾತ್ರಿ ಕಯ್ಯಾರು ಮಸೀದಿಗೆ ಸ್ವಲಾತ್‌ಗಾಗಿ ತೆರಳಿದ್ದರು. ರಾತ್ರಿ 8.30ರ ವೇಳೆ ಮರಳಿ ಬಂದಾಗ ಮನೆಗೆ ಕಳ್ಳರು ನುಗ್ಗಿರುವುದು ಅರಿವಿಗೆ ಬಂದಿತ್ತು. ಬೆಡ್‌ರೂಂನ ಕಪಾಟು ತೆರೆದಿಟ್ಟ ಸ್ಥಿತಿಯಲ್ಲಿದ್ದು, ಅದನ್ನು ಪರಿಶೀಲಿಸಿ ದಾಗ ಚಿನ್ನಾಭರಣ ನಾಪತ್ತೆಯಾಗಿ ರುವುದು ಗಮನಕ್ಕೆ ಬಂದಿತು. ಒಟ್ಟು 10 ಪವನ್ ಚಿನ್ನಾಭರಣಗಳ ಪೈಕಿ ೫ ಪವನ್ ಬಟ್ಟೆಬರೆಗಳ ಎಡೆಯಲ್ಲಿ ಅಂದು ರಾತ್ರಿ ಪತ್ತೆಯಾಗಿತ್ತು. ಉಳಿದ ೫ ಪವನ್ ನಾಪತ್ತೆಯಾಗಿರುವುದಾಗಿ ತಿಳಿಸಿ ಮನೆಯವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ನಿನ್ನೆ ಬೆಳಿಗ್ಗೆ ಕುಂಬಳೆ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್, ಎಸ್‌ಐ ಗಣೇಶನ್ ಹಾಗೂ ಶ್ವಾನದಳ, ಫಾರೆನ್ಸಿಕ್ ತಜ್ಞರು ತಲುಪಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮನೆ ಪರಿಸರದಿಂದ ೫ ಪವನ್ ಚಿನ್ನಾಭರಣ ಪತ್ತೆಯಾಗಿದೆ. ಮನೆ ಯಿಂದ ಚಿನ್ನಾಭರಣ ಕಳವಿಗೀಡಾ ಗಿರುವುದು ಹಾಗೂ ಅದು ಮನೆ ಸಮೀಪದಲ್ಲೇ ಪತ್ತೆ ಯಾಗಿರುವ ಬಗ್ಗೆ ತನಿಖೆ ನಡೆಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.






