ಉಪ್ಪಳ ಬಸ್ ನಿಲ್ದಾಣಕ್ಕೆ ಸರಕಾರಿ ಬಸ್ಗಳು ಪ್ರವೇಶಿಸಲು ಆಗ್ರಹಿಸಿ ವ್ಯಾಪಾರಿ ಸಮಿತಿಯಿಂದ ಮಂಜೇಶ್ವರ ಪೊಲೀಸರಿಗೆ ದೂರು
ಉಪ್ಪಳ: ಉಪ್ಪಳ ಬಸ್ ನಿಲ್ದಾಣದೊಳಗೆ ಕರ್ನಾಟಕ-ಕೇರಳ ಸರಕಾರಿ ಬಸ್ಗಳು ಪ್ರವೇಶಿಸದೆ ಹೊರಗಡೆ ಹೆದ್ದಾರಿಯಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆಗೊಳಗಾಗುತ್ತಿದ್ದು, ಬಸ್ಗಳು ನಿಲ್ದಾಣ ಪ್ರವೇಶಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಯೂನಿಟ್ ಮಂಜೇಶ್ವರ ಠಾಣೆಗೆ ದೂರು ನೀಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಬಸ್ ನಿಲ್ದಾಣ ಪ್ರವೇಶಿಸದ ಕಾರಣ ಬಸ್ಗಾಗಿ ಮಕ್ಕಳು, ಮಹಿಳೆಯರ ಸಹಿತ ವೃದ್ದರು ಸುಡು ಬಿಸಿಲಿಗೆ ಹೆದ್ದಾರಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ. ಕೂಡಲೇ ಎಲ್ಲಾ ಬಸ್ಗಳು ನಿಲ್ದಾಣ ಪ್ರವೇಶಿಸಬೇಕೆಂದು ಇಲ್ಲದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ವ್ಯಾಪಾರಿ ಸಂಘಟನೆ ಪ್ರತಿಭಟನೆ ನಡೆಸಲಿದೆ.