ಉಳುವಾರು ಮಖಾಂ ಉರೂಸ್ ನಾಳೆಯಿಂದ: ಮೇ 4ರವರೆಗೆ ಮತ ಪ್ರವಚನ
ಕುಂಬಳೆ: ಉಳುವಾರು ಅಸ್ಸಯ್ಯಿದ್ ಇಸ್ಮಾಯಿಲ್ ಅಲ್ ಬುಖಾರಿ ತಂಙಳ್ರ ಮಖಾಂ ಉರೂಸ್ ನಾಳೆಯಿಂದ ಮೇ 5ರವರೆಗೆ ನಡೆಯಲಿದೆಯೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 5ರಂದು ಹಗಲು ಉರೂಸ್ ಹಾಗೂ ಅದರಂಗವಾಗಿ ಮತ ಪ್ರವಚನ ಸರಣಿ ನಾಳೆಯಿಂದ ಮೇ 4ರವರೆಗೆ ನಡೆಯಲಿರುವುದು. ನಾಳೆ ಬೆಳಿಗ್ಗೆ 10 ಗಂಟೆಗೆ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಧ್ವಜಾರೋಹಣ ನಡೆಸುವರು. ರಾತ್ರಿ 8.30ಕ್ಕೆ ನಡೆಯುವ ಸಮ್ಮೇಳನವನ್ನು ಕಾಸರಗೋಡು ಸಂಯುಕ್ತ ಜಮಾಅತ್ ಖಾಸಿ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ರ ಅಧ್ಯಕ್ಷತೆಯನ್ನು ಸಯ್ಯಿದುಲ್ ಉಲಮ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು.
ಎನ್ಪಿಎಂ ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್ ಹಾದಿ ರಬ್ಬಾನಿ ಕುನ್ನುಂಕೈ ಪ್ರಾರ್ಥನೆ ನಡೆಸುವರು. ಅಬ್ದುಲ್ ಮಜೀದ್ ಬಾಖವಿ ಕೊಡುವಳ್ಳಿ ಭಾಷಣ ನಡೆಸುವರು. ಬಂಬ್ರಾಣ ಖತೀಬ್ ಜುನೈದ್ ಫೈಸಿ, ಪಾಪಂಕೋಯ ನಗರ್ ತಂಙಳ್ ಮಸ್ಜಿದ್ ಖತೀಬ್ ಅಬ್ದುಲ್ ಖಾದಿರ್ ಸಖಾಫಿ, ಒಳಯಂ ಖತೀಬ್ ಅನ್ವರ್ ಅಲಿ ದಾರಿಮಿ, ಶಿರಿಯ ಖತೀಬ್ ಮುಹಮ್ಮದ್ ಶಾಫಿ ಸಅದಿ, ಇಚ್ಲಂಗೋಡು ಖತೀಬ್ ಜಿಹ್ಫರ್ ಬುಸ್ತಾನಿ, ಹೇರೂರ್ ಖತೀಬ್ ಹಾಗೂ ಮುದರಿಸ್ ಆದ ಅಬ್ದುಲ್ ಜಲೀಲ್ ಫೈಸಿ, ಉರೂಸ್ ಸಮಿತಿ ಚೆಯರ್ಮೆನ್ ಎಂ. ಅಬ್ದುಲ್ಲ, ಉಳುವಾರು ಜಮಾಅತ್ ಕೋಶಾಧಿಕಾರಿ ಪಿ.ಎ. ಅಬ್ಬಾಸ್ ಖಾದಿರ್, ಉಳುವಾರು ಹಿದಾಯತ್ತುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಂ ಅಬೂಬಕರ್ ಸಖಾಫಿ, ಸಿದ್ಧಿಕ್ ಸಖಾಫಿ, ಅಬ್ದುಲ್ ಗಫೂರ್ ಸಅದಿ ಭಾಗವಹಿಸುವರು. ಉಳುವಾರು ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂuಟಿಜeಜಿiಟಿeಜ ಯು.ಪಿ. ಸ್ವಾಗತಿಸುವರು.
26ರಂದು ರಾತ್ರಿ 8.30ಕ್ಕೆ ಕುಟ್ಟಂಬಾರ ಅಬ್ದುಲ್ ರೆಹಮಾನ್ ದಾರಿಮಿ, 27ರಂದು ಅನ್ವರ್ ಅಲಿ ಹುದವಿ, 28ರಂದು ಶಾಫಿ ಸಖಾಫಿ ಮುಂಡAಬ್ರ, 29ರಂದು ಮುಹಮ್ಮದ್ ಹನೀಫ್ ನಿಸ್ಸಾಮಿ, 30ರಂದು ಮಸ್ಹುದ್ ಸಖಾಫಿ ಗುಡಲ್ಲೂರು ಮೊದಲಾದ ಪಂಡಿತರು ಭಾಷಣ ನಡೆಸುವರು. ಮೇ 1ರಂದು ಶಮೀರ್ ದಾರಿಮಿ ಕೊಲ್ಲಂ, 2ರಂದು ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ, 3ರಂದು ಖಲೀಲ್ ಹುದವಿ ಎಂಬಿವರು ವಿವಿಧ ವಿಷಯಗಳ ಕುರಿತು ಭಾಷಣ ಮಾಡುವರು.
4ರಂದು ರಾತ್ರಿ 8ಕ್ಕೆ ನಡೆಯುವ ಸಮಾರೋಪ ಸಮ್ಮೇಳನವನ್ನು ಸಯ್ಯಿದ್ ಇಬ್ರಾಹಿಂ ಖಲೀಕ್ ಬುಖಾರಿ ಉದ್ಘಾಟಿಸುವರು. ಕುಂಬೋಳ್ ಸಯ್ಯಿದ್ ಸಹ್ಫರ್ ಸ್ವಾದಿಕ್ ತಂಙಳ್ ಪ್ರಾರ್ಥನೆ ನಡೆಸುವರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಯಾಗಿರುವರು.