ಎಂಡಿಎಂಎ ಪತ್ತೆಗೆಂದು ತೆರಳಿದ ಪೊಲೀಸ್ ತಂಡದಿಂದ ಅನಧಿಕೃತ ಗ್ಯಾಸ್ ಸಂಗ್ರಹ ಪತ್ತೆ

ಕಾಸರಗೋಡು: ಚೆಂಗಳ ಚೇರೂರಿನಲ್ಲಿ ಅನಧಿಕೃತ ಗ್ಯಾಸ್ ಸಂಗ್ರಹ ಪತ್ತೆಹಚ್ಚಲಾಗಿದೆ. 170 ಅನಿಲ ಜಾಡಿಗಳು, ಗ್ಯಾಸ್ ತುಂಬಿಸಲಿರುವ ಉಪಕರಣಗಳನ್ನು ವಶಪಡಿಸಲಾಗಿದೆ. ಓರ್ವ ವ್ಯಕ್ತಿಯ ಮನೆ ಪರಿಸರದಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಹಚ್ಚಲಾಗಿದೆ. ಎಂಡಿಎಂಎ ವಶಪಡಿಸಲೆಂದು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್‌ರ ನೇತೃತ್ವದಲ್ಲಿರುವ ತಂಡ ನಡೆಸಿದ ಪರಿಶೀಲನೆಯಲ್ಲಿ ಅನಧಿಕೃತ ಗ್ಯಾಸ್ ಸಂಗ್ರಹ ಪತ್ತೆಯಾಗಿದೆ. ಬಳಿಕ ಕಾಸರಗೋಡು ತಾಲೂಕು ಸಪ್ಲೈ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯ್ಕ್, ರೇಶನ್ ಇನ್ಸ್‌ಪೆಕ್ಟರ್‌ಗಳಾದ ಪಿ. ಕೊರಗಪ್ಪ, ಇ. ಪ್ರಭಾಕರನ್, ದಿಲೀಪ್ ಎಂಬಿವರ ನೇತೃತ್ವದಲ್ಲಿ ಸ್ಥಳಕ್ಕೆ ತಲುಪಿ ಮುಂದಿನ ಕ್ರಮ ಕೈಗೊಂಡರು. ಮನೆ ಅಗತ್ಯಗಳಿಗೆ ಉಪಯೋಗಿಸುವ ಎಚ್‌ಪಿ ಕಂಪೆನಿಯ 134 ಸಿಲಿಂಡರ್‌ಗಳು, 36 ವಾಣಿಜ್ಯ ಸಿಲಿಂಡರ್‌ಗಳನ್ನು ವಶಪಡಿಸಲಾಗಿದೆ. ವಶಪಡಿಸಿದ ಅನಿಲಜಾಡಿಗಳು ಹಾಗೂ ಇತರ ಉಪಕರಣಗಳನ್ನು ತಾತ್ಕಾಲಿಕವಾಗಿ ಸಂರಕ್ಷಿಸಲು ಗ್ಯಾಸ್ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ. ವರದಿ ಜಿಲ್ಲಾಧಿಕಾರಿಗೆ ಸಲ್ಲಿಸುವುದಾಗಿ ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯ್ಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page