ಎಡರಂಗ ಸರಕಾರದ ಅಂತ್ಯ ಸನ್ನಿಹಿತ- ಕಾಂಗ್ರೆಸ್
ಉಪ್ಪಳ: ಕೇರಳದ ಎಡರಂಗ ಸರಕಾರ ಜನರ ಮೇಲೆ ದ್ರೋಹವೆಸಗುತ್ತಿದ್ದು ಕಂಡಕಂಡಲ್ಲಿ ದಂಡ ವಸೂಲಿ ಮಾಡಿ ಖಜಾನೆ ತುಂಬಿಸುವುದನ್ನು ಅಲಂಕಾರ ಎಂದು ಭಾವಿಸಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಆರೋಪಿಸಿದರು.
ಸ್ವಸ್ಥ ಆಡಳಿತ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡ ಎಡರಂಗ ಸರಕಾರದ ಅಂತ್ಯ ಸನ್ನಿಹಿತವಾಗಿದೆ ಎಂದು ಅವರು ನುಡಿದರು. ಮಂಗಲ್ಪಾಡಿ ಮಂಡಲದ ಬಂದ್ಯೋಡು ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ ಹಾಗೂ ಮಹಾತ್ಮಾಗಾಂಧಿ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬರ್ನಾಡ್ ಡಿ ಅಲ್ಮೇಡ ಅಧ್ಯಕ್ಷತೆ ವಹಿಸಿದರು. ಬಾಬು ಬಂದ್ಯೋಡು, ಫಾರುಕ್ ಶಿರಿಯ, ಮೊಹಮ್ಮದ್ ಸೀಗಂದಡಿ ಉಪಸ್ಥಿತರಿದ್ದರು. ನೂತನ ಸಮಿತಿಗೆ ಬರ್ನಾಡ್ ಡಿ. ಅಲ್ಮೇಡ ಅಧ್ಯಕ್ಷರಾಗಿ, ಚಂದ್ರಿಕಾ, ಗೀತಾ ಬಂದ್ಯೋಡು ಉಪಾಧ್ಯಕ್ಷರಾಗಿ, ರಶೀದ್ ಮಾಸ್ತರ್ ಪ್ರಧಾನ ಕಾರ್ಯದರ್ಶಿಯಾಗಿ, ಜೊತೆ ಕಾರ್ಯದರ್ಶಿಗಳಾಗಿ ನಸೀಮ, ಸಲೀನಾ ಸ್ಮಿತಾ ಡಿ ಅಲ್ಮೇಡ, ಕೋಶಾಧಿಕಾರಿಯಾಗಿ ಲತೀಫ್, ಸದಸ್ಯರಾಗಿ ಮನೋಹರ, ವರುಣ್, ನಸೀನ, ವಿವೇಕ್, ಖಾದರ್, ಕಲಿಸ್ತ, ಆಸ್ಯಮ್ಮ ಆಯ್ಕೆಯಾದರು.