ಎನ್‌ವೈಎಲ್ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಬೇಕಲ್ ನಿಧನ

ಕಾಸರಗೋಡು: ಎನ್‌ವೈಎಲ್ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಬೇಕಲ್ (43) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಬೇಕಲ ನಿವಾಸಿಯಾದ ರಾಶಿದ್ ಪೆರಿಯಾಟಡ್ಕದಲ್ಲಿ ವಾಸಿಸುತ್ತಿದ್ದರು. ಫುಟ್ಭಾಲ್ ಟೂರ್ನಮೆಂಟ್ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದ ಇವರು ಕ್ಷೇಮ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದರು.

ದಿ| ಕೆ. ಅಬೂಬಕರ್-ನಫೀಸ ದಂಪತಿಯ ಪುತ್ರನಾದ ಮೃತರು ಪತ್ನಿ ರಂಸೀನ, ಮಕ್ಕಳಾದ ಹಂಸ, ರಯಾನ್, ರಾಸಿ,ಸಹೋದರ-ಸಹೋದರಿಯರಾದ ದಾವೂದ್, ಹಾಶಿಂ, ಶಂಸುದ್ದೀನ್, ಅಶ್ರಫ್, ಸುಲೈಖ, ಬದ್ರುನ್ನೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page