ಎಲ್ಐಸಿ ಏಜೆಂಟ್ ಹೃದಯಾಘಾತದಿಂದ ನಿಧನ
ಮಂಜೇಶ್ವರ: ಎಲ್ಐಸಿ ಏಜೆಂಟ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಚೌಕಿ ಸಮೃದ್ಧಿ ನಿಲಯದ ಸೋಮಶೇಖರ ಬಿ (43) ಮೃತಪಟ್ಟ ವ್ಯಕ್ತಿ. ಇವರಿಗೆ ನಿನ್ನೆ ರಾತ್ರಿ ಮನೆಯಲ್ಲಿ ಹೃದಯಾಘಾತ ವುಂಟಾಗಿತ್ತು. ಕೂಡಲೇ ಹೊಸಂ ಗಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿವಂಗತರಾದ ದೇರ ಮೂಲ್ಯ-ರಾಧಾ ದಂಪತಿಯ ಪುತ್ರನಾದ ಮೃತರು ಪತ್ನಿ ಚಂದ್ರಿಕಾ, ಮಕ್ಕಳಾದ ಸಮರ್ಥ್, ಸಮೃದ್ಧಿ, ಸಹೋದರ-ಸಹೋದರಿಯರಾದ ಭೋಜರಾಜ್, ರಮಣಿ, ಶೋಭಾ, ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ.