ಎ.ಕೆ. ಬ್ರದರ್ಸ್ ಸಂಸ್ಥೆಗಳ ಮಾಲಕ ನಿಧನ
ಕಾಸರಗೋಡು: ಖ್ಯಾತ ಉದ್ಯಮಿ, ಎ.ಕೆ. ಬ್ರದರ್ಸ್ ಸಂಸ್ಥೆಗಳ ಮಾಲಕ ಎ.ಕೆ. ಮುಹಮ್ಮದ್ ಅನ್ವರ್ (65) ನಿಧನ ಹೊಂದಿದರು. ಕೇರಳ ಸ್ಟೇಟ್ ಕಿರು ಕೈಗಾರಿಕೆ ಫೆಡರೇಶನ್ ಜಿಲ್ಲಾ ಉಪಾಧ್ಯ ಕ್ಷರಾಗಿದ್ದರು. ಇಂದು ಮುಂಜಾನೆ ನಿಧನ ಸಂಭವಿಸಿದ್ದು, ಹೃದಯಾ ಘಾತ ಮರಣಕ್ಕೆ ಕಾರಣವೆನ್ನ ಲಾಗಿದೆ. ನಿಧನಕ್ಕೆ ಕೆಎಸ್ಎಸ್ ಐಎಫ್ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.