ಐಎಂಎಯಿಂದ ಮಾದಕ ಪದಾರ್ಥ ವಿರುದ್ಧ ದಿನಾಚರಣೆ

ಕಾಸರಗೋಡು: ಇಂಡ್ಯನ್ ಮೆಡಿಕಲ್  ಅಸೋಸಿಯೇಶನ್, ಮೈಂಡ್‌ವೇರ್ ಕ್ಲಿನಿಕ್‌ನ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ಪದಾರ್ಥ ವಿರುದ್ಧ ದಿನ ಆಚರಿಸಲಾಯಿತು. ಇದೇ ವೇಳೆ ಮಾಲಿಕ್ ದೀನಾರ್ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಗಳಿಂದ ಮೋಕ್ ಡೆಮೋನ್‌ಸ್ಟ್ರೇಷನ್ ನಡೆಸಲಾಯಿತು.

ಐಎಂಎ ಅಧ್ಯಕ್ಷ ಡಾ| ಹರಿಕಿರಣ್ ಬಂಗೇರ ಉದ್ಘಾಟಿಸಿದರು. ಡಾ| ಪಿ.ಎಂ.ಎ ನಿಶಾದ್ ಪೆರ್ಲ ಅಧ್ಯಕ್ಷತೆ ವಹಿಸಿದರು. ಐಎಂಎ ಉಪಾಧ್ಯಕ್ಷ ಡಾ| ಖಾಸಿಂ, ಅನ್ವರ್ ಸಾದತ್, ಡಾ| ಜ್ಯೋತ್ಸ್ನಾ, ಆಯಿಷಾ ಪೆರ್ಲ, ಎ.ಎ. ಮೊಹಮ್ಮದ್ ನುಹಾನ್ ಮಾತನಾಡಿದರು. ಅಭಿಜಿತ್ ಪಿ. ಸ್ವಾಗತಿಸಿದರು.

Leave a Reply

Your email address will not be published. Required fields are marked *

You cannot copy content of this page