ಐತಿಹಾಸಿಕ ದಾಖಲೆಯತ್ತ ಚಿನ್ನದ ಬೆಲೆ
ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆ ಐತಿಹಾಸಿಕ ದಾಖಲಯತ್ತ ನೆಗೆಯುತ್ತಿದೆ. ಇಂದು ಒಂದು ಪವನ್ ಚಿನ್ನಕ್ಕೆ 65,840 ರೂ.ಗೇರಿದೆ. ನಿನ್ನೆಗಿಂತ ಇಂದು 880 ರೂ.ಗಳ ಹೆಚ್ಚಳ ಉಂಟಾಗಿದೆ. ಇದಕ್ಕೆ ಅನುಸರಿಸಿ ಗ್ರಾಂ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ನಿನ್ನೆಗಿಂತ ಇಂದು 110 ರೂ.ಗಳ ಹೆಚ್ಚಳವಾಗಿ ಒಂದು ಗ್ರಾಂಗೆ 8230ರೂ.ಗೇರಿದೆ. ಈ ತಿಂಗಳ ಆರಂಭದಲ್ಲಿ ಒಂದು ಪವನ್ ಚಿನ್ನಕ್ಕೆ 63,520 ರೂ. ಆಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ 60 ಸಾವಿರ ರೂಪಾಯಿ ದಾಟಿರುವುದು ಜನವರಿ 22ರಂದು ಆಗಿತ್ತು. ಅನಂತರ ಕೆಲವೇ ದಿನಗಳೊಳಗೆ ಹೆಚ್ಚುತ್ತಾ ಸಾಗಿ ಇದೀಗ ಅತೀ ಹೆಚ್ಚಿನ ದರ ದಾಖಲಾಗಿದೆ.