ಐಲ ಕ್ಷೇತ್ರದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ಅ. ೧೫ರಿಂದ
ಉಪ್ಪಳ: ಐಲ ಶ್ರೀದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ಈ ತಿಂಗಳ 15ರಿಂದ 23ರ ತನಕ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ಪೌರೋಹಿv್ಯÀದಲ್ಲಿ ವಿವಿಧ ಧಾರ್ಮಿಕ ಹಾಗೂ ಸಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ ಗಣಹೋಮ, ಮಧ್ಯಾಹ್ನ 12.30ಕ್ಕೆ ಹೂವಿನ ಪೂಜೆ, ಮಹಾ ಪೂಜೆ, ಸಂತರ್ಪಣೆ, ರಾತ್ರಿ 7.30ಕ್ಕೆ ಹೂವಿನ ಪೂಜೆ, ಮಹಾಪೂಜೆ, ಬೆಳಿಗ್ಗೆ 10ರಿಂದ, ಸಂಜೆ 6ರಿಂದ, ರಾತ್ರಿ 7.30 ಭಜನೆ ನಡೆಯಲಿದೆ. ರಾತ್ರಿ 9ರಿಂದ ರಂಗಪೂಜೆ, 20ರಂದು ಚಂಡಿಕಾ ಯಾಗ ನಡೆಯಲಿದೆ.
ರಾತ್ರಿ 7ರಿಂದ ನಡೆಯುವ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿ 15ರಂದು ಯಕ್ಷ ಗಾನ ತಾಳಮದ್ದಳೆ, 16ರಂದು ಶ್ರೀ ಕೃಷ್ಣ ತುಲಾಭಾರ ಹರಿಕಥೆ ಸತ್ಸಂಗ, 17ರಂದು ಸ್ವರ ಸಂಧ್ಯಾ, 18ರಂದು ಹರಿಕಥೆ, 19ರಂದು ಯಕ್ಷಗಾನ ತಾಳಮದ್ದಳೆ, 20ರಂದು ನೃತ್ಯ ಸಂಭ್ರಮ, 21ರಂದು ನೃತ್ಯಾರ್ಪಣಂ, 22ರಂದು ಸಂಗೀತ ಕಛೇರಿ, 23ರಂದು ಹರಿಕಥೆ ಸತ್ಸಂಗ, ಹಾಗೂ 23ರಂದು ಬೆಳಿಗ್ಗೆ 6ರಿಂದ ಆಯುಧ ಪೂಜೆ, ವಾಹನ ಪೂಜೆ, 24ರಂದು ಬೆಳಿಗ್ಗೆ 9ರಿಂದ ವಿಜಯದಶಮಿ ಕಾರ್ಯಕ್ರಮದಂಗ ವಾಗಿ ವಿದ್ಯಾರಂಭ ನಡೆಯಲಿದೆ.