ಕಜಂಪಾಡಿ ಶಾಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ತರಗತಿ
ಪೆರ್ಲ: ನಾಲಂದ ಕಾಲೇಜು ವಿದ್ಯಾರ್ಥಿಗಳ ಎನ್ನೆಸ್ಸೆಸ್ ಶಿಬಿರದಂಗ ವಾಗಿ ನಿನ್ನೆ ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮ ಆಯೋಜಿಸ ಲಾಯಿತು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಪ್ರಿನ್ಸಿಪಾಲ್ ಮೊಹಮ್ಮದ್ ಅಲಿ ಪೆರ್ಲ ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಸಂವಹನ ಕೌಶಲ್ಯ ಹಾಗೂ ನಾಯಕತ್ವ” ವಿಷಯದ ಕುರಿತು ತರಗತಿ ನೀಡಿದರು. ವಾರ್ಡ್ ಪ್ರತಿನಿಧಿ ರೂಪವಾಣಿ ಆರ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಯೋಜನಾ ಧಿಕಾರಿ ವರ್ಷಿತ್ ಕೆ. ಸಂಯೋಜಿಸಿದರು. ಆಯೋಜನಾ ಮಂಡಳಿ ಸದಸ್ಯ ಶ್ರೀಹರಿ ಭಟ್ ಹಾಗೂ ಖಜಾಂಚಿ ದಯಾನಂದ ಕಜಂಪಾಡಿ ಉಪಸ್ಥಿತರಿದ್ದರು.