ಕಯ್ಯಾರ್ 114ನೇ ಬೂತ್‌ನಲ್ಲಿ ಮಹಿಳಾ ಸಮಾವೇಶ
ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಚುನಾವಣಾ ಪ್ರಚಾರಾರ್ಥದ ಅಂಗವಾಗಿ ಪೈವಳಿಕೆ ಪಂಚಾಯತ್‌ನ ಕಯ್ಯಾರ್ 114ನೇ ಬೂತ್‌ನಲ್ಲಿ ಮಹಿಳಾ ಸಮಾವೇಶ ನಡೆಯಿತು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷೆ ಅಂಜು ಜೋಸ್ನಿ ಉದ್ಘಾಟಿಸಿ ಮಾತ ನಾಡಿದರು. ಬಿಜೆಪಿ ಪೈವಳಿಕೆ ಪಂಚಾ ಯತ್ ಅಧ್ಯಕ್ಷ ಲೊಕೇಶ್ ನೋಂಡಾ, ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲ್, ಬೂತ್ ಅಧ್ಯಕ್ಷ ಗಣೇಶ್ ಆಳ್ವ, ಮಹಿಳಾ ಮೋರ್ಚಾ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷೆ ರೇವತಿ, ಹಿರಿಯರಾದ ನಾರಾಯಣ. ಕೆ.ಪಿ. ಹಾಗೂ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.