ಕರಂದಕ್ಕಾಡಿನಲ್ಲಿ ಪೊಲೀಸರ ವಿರುದ್ಧ ಆಕ್ರಮಣ: 5 ಮಂದಿ ಸೆರೆ; ಉಳಿದವರಿಗಾಗಿ ಶೋಧ

ಕಾಸರಗೋಡು: ಬಹಿರಂಗ ಮದ್ಯಪಾನ ತಡೆಯಲು ಯತ್ನಿಸಿದ ಎಸ್‌ಐ ಹಾಗೂ ತಂಡವನ್ನು ತಡೆದು ನಿಲ್ಲಿಸಿರುವುದಾಗಿ ದೂರಲಾಗಿದೆ. ಕಾಸರಗೋಡು ನಗರಠಾಣೆ ಎಸ್‌ಐ ಎನ್. ಅನ್ಸಾರ್‌ರ ದೂರಿನಂತೆ ೧೨ ಮಂದಿ ವಿರುದ್ಧ ಕೇಸು ದಾಖಲಿಸ ಲಾಗಿದೆ. ಈಗಾಗಲೇ 5 ಮಂದಿ ಯನ್ನು ಬಂಧಿಸಲಾಗಿದೆ. ಉಳಿದವರಿ ಗಾಗಿ ಹುಡುಕಾಟ ಮುಂದುವರಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕರಂದಕ್ಕಾಡ್‌ನ ಸನತ್ (45), ಚಂದ್ರಹಾಸ (38), ಶಿವಾಜಿನಗರದ ಸಂದೀಪ್ (29), ಕೂಡ್ಲುವಿನ ಸೂರ್ಯದಾಸ್ (36), ರಾಮ್ ದಾಸ್ ನಗರದ ದೀಪಕ್ (34) ಬಂಧಿತರು.

ಆದಿತ್ಯವಾರ ಮಧ್ಯಾಹ್ನ 1 ಗಂಟೆ ವೇಳೆ ಕರಂದಕ್ಕಾಡಿನ ಮುಚ್ಚಿದ ಹೋಟೆಲ್‌ನ ಸಮೀಪ ದಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಇಲ್ಲಿ ಬಹಿರಂಗ ಮದ್ಯಪಾನ ಹಾಗೂ ಮದ್ಯ ಮಾರಾಟ ನಡೆಯುತ್ತಿದೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ತಡೆಯೊಡ್ಡಿ ಎಸ್‌ಐಯನ್ನು ಬಲವಾಗಿ ಹಿಡಿದು ಬೆದರಿಸಿರುವು ದಾಗಿ ಟೌನ್ ಪೊಲೀಸರು ದಾಖಲಿ ಸಿದ ಕೇಸಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page