ಕಾಂಗ್ರೆಸ್ನಿಂದ ತಾಲೂಕು ಸಪ್ಲೈ ಕಚೇರಿ ಧರಣಿ
ಉಪ್ಪಳ: ಬೆಲೆಯೇರಿಕೆ, ಭ್ರಷ್ಟಾಚಾರ ದುರಾಡಳಿತೆಗಳಿಂದ ಕಂಗೆಟ್ಟಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ರೇಶನ್ ಅಂಗಡಿಗಳಲ್ಲಿ ಅಗತ್ಯ ಆಹಾರ ಧಾನ್ಯಗಳ ಕೊರತೆ ಸೃಷ್ಟಿಯಾಗಿದ್ದು, ಎಡರಂಗ ಸರಕಾರ ಜನತೆಯ ಸಹನೆ ಪರೀಕ್ಷಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್ ಆರೋಪಿಸಿದರು. ರೇಶನ್ ಅಂಗಡಿಗಳಲ್ಲಿ ಆಹಾರ ವಸ್ತುಗಳ ಅಲಭ್ಯತೆ ಪ್ರತಿಭಟಿಸಿ ಮಂಜೇಶ್ವರ, ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳು ಜಂಟಿಯಾಗಿ ನಡೆಸಿದ ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಸೋಮಶೇಖರ ಜೆ.ಎಸ್, ಹರ್ಷಾದ್ ವರ್ಕಾಡಿ, ಉಮ್ಮರ್ ಬೋರ್ಕಳ, ಲಕ್ಷ್ಮಣ ಪ್ರಭು ಕುಂಬಳೆ, ಝುನೈದ್, ಫಾರೂಕ್, ಸತ್ಯನ್ ಸಿ. ಉಪ್ಪಳ, ಖಲೀಲ್, ಓಂ ಕೃಷ್ಣ, ನಾಗೇಶ್, ಮನ್ಸೂರ್ ಬಿ.ಎಂ, ಇರ್ಷಾದ್, ಮೋಹನ್ ರೈ, ನಾಸಿರ್, ಪೃಥ್ವಿರಾಜ್ ಶೆಟ್ಟಿ, ರವಿರಾಜ್, ಗಣೇಶ್ ಪಾವೂರು, ಪುರುಷೋತ್ತಮ ಅರಿಬೈಲು, ಬಾಬು ಬಂದ್ಯೋಡು, ವಸಂತ, ರಾಜೇಶ್, ಬರ್ನಾಡ್ ಡಿ ಅಲ್ಮೇಡ, ಪ್ರದೀಪ್ ಶೆಟ್ಟಿ, ವಿನೋದ್ ಕುಮಾರ್ ಸಹಿತ ಹಲವರು ಉಪಸ್ಥಿತರಿದ್ದರು. ಸುಂದರ ಆರಿಕ್ಕಾಡಿ ಸ್ವಾಗತಿಸಿ, ದಿವಾಕರ ಎಸ್.ಜೆ. ವಂದಿಸಿದರು.