ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಹೇಳಿಕೆ ಪಕ್ಷ ಕ್ಷೀಣಿಸುತ್ತಿರುವ ಭಯದಿಂದ-ಸಿಪಿಎಂ
ಪೈವಳಿಕೆ: ಸಿಪಿಎಂನಿಂದ ಶ್ರೀಮಂತ ವರ್ಗದ ಓಲೈಕೆ ಎಂಬ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪಿ.ಕೆ. ಫೈಸಲ್‌ರ ಹೇಳಿಕೆ ಕೇರಳದಲ್ಲಿ ಕಾಂಗ್ರೆಸ್ ದಿನ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಭಯದಿಂದ ನೀಡಿದ ಹೇಳಿಕೆ ಆಗಿದೆಯೆಂದು ಸಿಪಿಎಂ ಮುಖಂಡ ಎಂ.ಸಿ. ನಾಯ್ಕ್ ತಿಳಿಸಿದ್ದಾರೆ. ಕಾಂಗ್ರೆಸ್‌ನ ಪ್ರಮುಖರು ಸಿಪಿಎಂಗೆ ಸೇರಿದ್ದಾರೆ. ತಿರುವನಂತ ಪುರದಲ್ಲಿ ಸಂಸದ ಶಶಿ ತರೂರ್ ಕೂಡ ತೂಗುಯ್ಯಾಲೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಈ ಹೇಳಿಕೆ ನೀಡಿರಬೇಕೆಂದು ಸಿಪಿಎಂ ಅಭಿಪ್ರಾಯಪಟ್ಟಿದ್ದು, ಪಕ್ಷಕ್ಕೆ ಶ್ರೀಮಂತರು, ಬಡವರೆಂಬ ಬೇಧ ಭಾವವಿಲ್ಲವೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.