ಕಾಡುಹಂದಿ ದಾಳಿ: ಕಾರ್ಮಿಕನಿಗೆ ಗಾಯ
ಕಾಸರಗೋಡು: ಕಾಡುಹಂದಿಯ ದಾಳಿಯಿಂದ ಕಾರ್ಮಿಕನೋರ್ವ ಗಾಯಗೊಂಡ ಘಟನೆ ನಡೆದಿದೆ. ರಾಜಪುರಂ ಸಮೀಪದ ಎಣ್ಣಪ್ಪಾರ ಮೋದಿರಕಾಟ್‌ನ ಮಧುಸೂದನನ್ (42) ಗಾಯಗೊಂಡ ಕಾರ್ಮಿಕ. ಇವರನ್ನು ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮಧುಸೂದನನ್ ನಿನ್ನೆ ಬೆಳಿಗ್ಗೆ 11.30ಕ್ಕೆ ಮೋದಿರಕಾಟ್ ಕೋಯಿಪುರತ್ತ್‌ನ ವ್ಯಕ್ತಿಯೋರ್ವರ ಹಿತ್ತಿಲಿನಿಂದ ತೆಂಗಿನಕಾಯಿ ಕೊಯ್ಯಲೆಂದು ಹೋದಾಗ ಅಲ್ಲಿಗೆ ಕಾಡುಹಂದಿ ದಿಢೀರ್ ನುಗ್ಗಿ ಬಂದು ಮಧುಸೂ ದನನ್‌ರಿಗೆ ತಿವಿದಿದೆ. ಆ ವೇಳೆ ಅಲ್ಲಿದ್ದ ಇತರರು ತಪ್ಪಿಸಿಕೊಂಡರು. ಈ ಪ್ರದೇಶದಲ್ಲಿ ಕಾಡುಹಂದಿಗಳ ಉಪಟಳ ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ ಎಂದು ಊರವರು ತಿಳಿಸಿದ್ದಾರೆ.