ಕಾಡು ಪೊದೆ ಆವರಿಸಿದ್ದ ವಿದ್ಯುತ್ ಕಂಬ ಸ್ವಚ್ಛ ಕಾರವಲ್ ಮೀಡಿಯಾ ವರದಿಗೆ ಶೀಘ್ರ ಸ್ಪಂದನೆ

ಕುಂಬಳೆ: ಕಾರವಲ್ ಮೀಡಿಯಾದಲ್ಲಿ ಪ್ರಕಟಗೊಂಡ ಸುದ್ಧಿಗೆ ಸ್ಪಂದಿಸಿ ವಿದ್ಯುತ್ ಕಂಬಕ್ಕೆ ಆವರಿಸಿದ್ದ ಪೊದೆಯನ್ನು ತೆರವುಗೊಳಿಸಲಾಗಿದೆ. ಕುಂಬಳೆ ಪಂಚಾಯತ್‌ನ ೮ನೇ ವಾರ್ಡ್‌ನ ಚಿಪ್ಪಿನಡ್ಕ ಅಂಗನವಾಡಿ ಬಳಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಕಾಡುಪೊದೆ ಆವರಿಸಿ ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿತ್ತು. ಈ ವರದಿಯನ್ನು ನಿನ್ನೆ ಕಾರವಲ್ ಮೀಡಿಯಾದಲ್ಲಿ ಚಿತ್ರ ಸಹಿತ ಪ್ರಕಟಿಸಲಾಗಿತ್ತು. ಈ ವರದಿ ಗಮನಕ್ಕೆ ಬಂದ ವಿದ್ಯುತ್ ಇಲಾಖೆ ಅಧಿಕಾರಿಗಳು ಆವಾಗಲೇ ಸ್ಥಳಕ್ಕೆ ತಲುಪಿ ಕಂಬಕ್ಕೆ ಆವರಿಸಿಕೊಂಡಿದ್ದ ಪೊದೆ ಬಳ್ಳಿಗಳನ್ನು ತೆರವುಗೊಳಿಸಿದ್ದಾರೆ. ಪ್ರಸ್ತುತ ಈ ಅಪಾಯಕ್ಕೆ ಪರಿಹಾರವಾ ಯಿತಾದರೂ ತಂತಿಯ ಕೆಳಗೆ ರಸ್ತೆಯ ಲ್ಲಿ ಪೊದೆಗಳು ಬೆಳೆಯುತ್ತಿದೆ. ಅದನ್ನು ಕೂಡಾ ತೆರವುಗೊಳಿಸಬೇಕಾದ ಅಗತ್ಯವಿದೆ.

Leave a Reply

Your email address will not be published. Required fields are marked *

You cannot copy content of this page