ಕಾಪಾ ಪ್ರಕಾರ ಹಲವು ಪ್ರಕರಣಗಳ ಆರೋಪಿ ಸೆರೆ
ಕಾಸರಗೋಡು: ಆಲಂಪಾಡಿ ಚಕ್ಕರಪಳ್ಳ ನಿವಾಸಿ ಅಮೀರಲಿ (22) ಎಂಬಾತನ ವಿರುದ್ಧ ವಿದ್ಯಾನಗರ ಪೊಲೀಸರು ಕಾಪಾ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಆತನನ್ನು ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯು.ಪಿ. ವಿಪಿನ್ ಬಂಧಿಸಿದ್ದಾರೆ. ಬೇರೊಂದು ಪ್ರಕರ ಣಕ್ಕೆ ಸಂಬಂಧಿಸಿ ಬಂಧಿತನಾದ ಅಮೀರಲಿ ಈಗ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿ ದ್ದಾನೆ. ಅಲ್ಲಿಂದ ಆತನ ಬಂಧನವನ್ನು ಕಾಪಾ ಪ್ರಕಾರ ದಾಖಲಿಸಲಾಗಿದೆ. ವಿದ್ಯಾನಗರ ಮತ್ತು ಮೇಲ್ಪರಂಬ ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡಿರುವ ಹಲವು ಪ್ರಕರಣಗಳಲ್ಲಿ ಅಮೀರಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.