ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ವಲಸೆ ಕಾರ್ಮಿಕರಿದ್ದಾರೆ
ಕಾಸರಗೋಡು: ರಾಜ್ಯ ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ದಷ್ಟು ವಲಸೆ ಕಾರ್ಮಿಕರಿ ದ್ದಾರೆ. ಆದರೆ ಇದರಲ್ಲಿ ಎಷ್ಟು ಮಂದಿ ಕೇರಳದಲ್ಲಿ ಈಗಲೂ ಉಳಿದುಕೊಂಡಿ ದ್ದಾರೆಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲಾಖೆಗೆ ಲಭಿಸಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಕೇರಳ ಕಾರ್ಮಿಕರ ಇಲಾಖೆಯಲ್ಲಿ ೧.೨೫ ಲಕ್ಷದಷ್ಟು ವಲಸೆ ಕಾರ್ಮಿಕರು ಹೆಸರು ನೋಂದಾಯಿಸಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಕೇರಳಕ್ಕೆ ಆಗಮಿಸುವ ವಲಸೆ ಕಾರ್ಮಿಕರು ರಾಜ್ಯದ ಆಯಾ ಪ್ರದೇಶಗಳ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಅಧಿಕೃತ ದಾಖಲು ಪತ್ರಗಳೊಂದಿಗೆ ಕಡ್ಡಾಯವಾಗಿ ತಮ್ಮ ಹೆಸರು ನೋಂದಾಯಿಸಬೇಕೆಂಬ ನಿಬಂಧನೆಯೂ ಇದೆ. ಆದರೆ ಹೀಗೆ ಕೇರಳಕ್ಕೆ ಬಂದಿರುವವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರು ಈಗಲೂ ತಮ್ಮ ಹೆಸರು ನೋಂದಾಯಿಸಿಲ್ಲ ವೆಂಬುವುದನ್ನೂ ಇಲಾಖೆ ಪತ್ತೆಹಚ್ಚಿದೆ. ಇದರಿಂದಾಗಿ ಕೇರಳದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ನಿಖರವಾದ ಲೆಕ್ಕಾಚಾರ ಲಭಿಸುತ್ತಿಲ್ಲ ಎಂದು ಸಂಬಂಧಪಟ್ಟವರು ಹೇಳುತ್ತಾರೆ.