ಕಾಸರಗೋಡಿನಲ್ಲಿ ನಿನ್ನೆ ಮೂರು ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಲೋಕಸಭಾ ಚುನಾವಣೆಯಲ್ಲಿ ಉಮೇದ್ವಾರರಾಗಿ ನಿನ್ನೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ಎಂ. ಸುಕುಮಾರಿ (ಬಹುಜನ್ ಸಮಾಜವಾದಿ ಪಾರ್ಟಿ), ಟಿ. ಅನೀಶ್ ಕುಮಾರ್, ಕೇಶವ (ಪಕ್ಷೇತರರಾಗಿ) ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎ ಉಮೇದ್ವಾರರಾದ ಎಂ.ಎಲ್. ಅಶ್ವಿನಿ ಮತ್ತು ಅವರ ಡಮ್ಮಿ ಅಭ್ಯರ್ಥಿಯಾಗಿ ಎ. ವೇಲಾಯುಧನ್ ಕಳೆದವಾರವೇ ನಾಮಪತ್ರ ಸಲ್ಲಿಸಿದ್ದರು. ಆ ಮೂಲಕ ಈ ಕ್ಷೇತ್ರದಲ್ಲಿ ನಿನ್ನೆ ತನಕ ನಾಮಪತ್ರ ಸಲ್ಲಿಸಿದವರ ಸಂಖ್ಯೆ ಐದಕ್ಕೇರಿದೆ. ರಾಜ್ಯ ದಲ್ಲಿ ಒಟ್ಟಾರೆಯಾಗಿ ವಿವಿಧ ಲೋP ಸಭಾ ಕ್ಷೇತ್ರಗಳಲ್ಲಿ ನಿನ್ನೆ ತನಕ ಒಟ್ಟು ೪೩ ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page