ಕಾಸರಗೋಡು, ಕುಂಬಳೆ ಸಹಿತ ರಾಜ್ಯದ ವಿವಿಧೆಡೆ ಕಳವು ನಡೆಸಿದ ಆರೋಪಿ ಕರ್ನಾಟಕದಲ್ಲಿ ಸೆರೆ

ಕಾಸರಗೋಡು: ಕಾಸರಗೋಡು ಸಹಿತ ಕೇರಳದ ವಿವಿಧೆಡೆಗಳಲ್ಲಿ ಮನೆ ಕಳವು ನಡೆಸಿದ ಆರೋಪಿ ಕರ್ನಾಟಕದ ಬೆಳ್ತಂಗಡಿ ಯಲ್ಲಿ ಸೆರೆಗೀಡಾಗಿದ್ದಾನೆ.

ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ಎಂಬಲ್ಲಿನ ಉಮೇಶ್ ಯಾನೆ ಉಮೇಶ್ ಬಳಗಾರ (೪೭) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಈತ ಕಾಸರಗೋಡು, ಕುಂಬಳೆ, ಪಾಲಕ್ಕಾಡ್, ತೃಶೂರು, ತಿರುವನಂ ತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ತನಿಖೆಯಲ್ಲಿ ತಿಳಿದುಬಂದಿದೆ.

ಅಲ್ಲದೆ ಕರ್ನಾಟಕದ ಪುತ್ತೂರು ನಗರಠಾಣೆ, ಸುಳ್ಯ, ಬಂಟ್ವಾಳ, ಮಂಗಳೂ ರು ಬಂದರು, ಉರ್ವ, ಮೂಡಬಿದಿರೆ ಠಾಣೆ ವ್ಯಾಪ್ತಿಯಲ್ಲೂ, ತಮಿಳುನಾಡಿನ ಸೇಲಂ, ಧರ್ಮಪುರಿ, ಕನ್ಯಾಕುಮಾರಿ, ದಿಂಡಿಗಲ್, ಆಂಧ್ರದ ವೈಜಾಕ್ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲೂ ಕಳ್ಳತನ ಮಾಡಿದ್ದಾನೆಂದು ತಿಳಿದುಬಂದಿದೆ.

ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಉಜಿರೆ ಅಜಿತ್‌ನಗರದ ಕಲ್ಲೆ ಎಂಬಲ್ಲಿನ ಫೆಲಿಕ್ಸ್ ರೋಡ್ರಿಗಸ್ ಎಂಬವರ  ಮನೆಯಿಂದ ಕಳೆದ ಅಗೋಸ್ತ್ ೧೨ರಂದು ೧೭೩ ಗ್ರಾಂ ಚಿನ್ನಾಭರಣ, ೩೫,೦೦೦ ರೂಪಾಯಿ  ನಗದು ಕಳವು ನಡೆದಿತ್ತು. ಈ ಬಗ್ಗೆ  ಕೇಸು ದಾಖಲಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಈಮಧ್ಯೆ ಆರೋಪಿ ಉಮೇಶ್ ಮೈಸೂರಿನ ಹುಣಸೂರಿನಲ್ಲಿ ದ್ದಾನೆಂದು ಮಾಹಿತಿ ಲಭಿಸಿತ್ತು. ಇದ ರಂತೆ ಬೆಳ್ತಂಗಡಿ ಸಿಪಿಐ ನಾಗೇಶ್ ಕದ್ರಿ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಉಮೇಶ್ ಹದಿನಾಲ್ಕರ ಹರೆಯದಲ್ಲೇ ಕಳ್ಳತನ ಆರಂಭಿಸಿದ್ದಾನೆನ್ನಲಾ ಗಿದೆ. ಹಲವು ಪ್ರಕರಣಗಳಲ್ಲಿ ಸೆರೆಗೀಡಾದ ಈತ ಜೈಲು ಶಿಕ್ಷೆ ಅನುಭವಿಸಿ ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಗೊಂ ಡಿದ್ದನು.  ಬಟ್ಟೆಬರೆ ಮಾರಾಟ ಮಾಡುವ ನೆಪದಲ್ಲಿ ಮನೆಗಳಿಗೆ ತೆರಳಿ ಈತ ಕಳವಿಗೆ ಹೊಂಚು ಹಾಕುತ್ತಿದ್ದನೆ ನ್ನಲಾಗಿದೆ. ಸ್ವಂತವಾಗಿ ಮೊಬೈಲ್ ಹೊಂದದ ಈತ ಬೇರೆಯವರ ಮೊಬೈಲ್‌ನಿಂದ ತನಗೆ ಬೇಕಾದವರಿಗೆ ಕರೆಮಾಡುತ್ತಿದ್ದನು. ಒಂದು ರಾಜ್ಯದಲ್ಲಿ ಕಳವು ನಡೆಸಿದ ಕೂಡಲೇ ಈತ ಬೇರೆ ರಾಜ್ಯಕ್ಕೆ ಪಲಾಯನ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ನಾಲ್ಕು ರಾಜ್ಯಗಳ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು. ಇದೀಗ ತನಿಖೆ ವೇಳೆ ಈತ ಕಾಸರಗೋಡು ಸಹಿತ ಕೇರಳದ ವಿವಿಧೆಡೆಗಳಲ್ಲಿ ಕಳವು ನಡೆಸಿರು ವುದಾಗಿ ತಪ್ಪೊಪ್ಪಿಕೊಂಡಿರುವುದ ರಿಂದ ಇಲ್ಲಿನ ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You cannot copy content of this page