ಕಿಳಿಂಗಾರು: ಭಜನೆಯೊಂದಿಗೆ ತೃತೀಯ ವಾರ್ಷಿಕೋತ್ಸವ
ಬದಿಯಡ್ಕ: ಕಿಳಿಂಗಾರು ನಿಡುಗಳ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಠದ ತೃತೀಯ ವಾರ್ಷಿಕೋತ್ಸವ ಜರಗಿತು. ಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಶರಣಂವಿಳಿ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಭಜನಾ ಸೇವೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಠ ಕಿಳಿಂಗಾರು ನಿಡುಗಳ, ಓಂಕಾರ್ ಬಾಲಗೋಕುಲ ರತ್ನಗಿರಿ, ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಶಾಸ್ತಾನಗರ ಮಜೀರ್ಪಳ್ಳಕಟ್ಟೆ, ಶ್ರೀ ಕುದ್ರೆಕ್ಕಾಳಿ ಅಮ್ಮ ಭಜನಾ ಸಂಘ ರತ್ನಗಿರಿ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಶಾಸ್ತಾನಗರ ಪಾಲ್ಗೊಂಡವು. ರಾತ್ರಿ ಮಹಾಮಂಗಳಾರತಿ, ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.