ಕುಂಬಳೆಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ: ವಾಹನಗಳಿಗೆ ಸಮಸ್ಯೆ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಪ್ರವೇಶದ್ವಾರದ ಬಳಿ ಪಂಚಾಯತ್ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಚರಂಡಿಯಿಂದ ಸಮಸ್ಯೆ ಎದುರಾಗಿದೆಯೆಂದು ಸಾರ್ವಜನಿಕರು ದೂರಿದ್ದಾರೆ.  ಕುಂಬಳೆ ಪಂಚಾಯತ್ ವತಿಯಿಂದ ಇತ್ತೀಚೆಗೆ ಚರಂಡಿ ಕಾಮಗಾರಿ ನಡೆಸಲಾಗಿದೆ. ದೇವಸ್ಥಾನದ ಪ್ರವೇಶದ್ವಾರದ ಬಳಿ ಚರಂಡಿ ಮೇಲೆ ಕಬ್ಬಿಣದ ಪಟ್ಟಿ ಅಳವಡಿಸಿದ್ದು, ಅದರ ಬದಿಯಲ್ಲಿರುವ ಹೊಂಡವನ್ನು ಹಾಗೆಯೇ ಬಿಡಲಾ ಗಿದೆ. ಇಲ್ಲಿ ವಾಹನಗಳು ತಿರುಗಿ ದೇವಸ್ಥಾನದತ್ತ ಸಂಚರಿಸುವಾಗ ಹೊಂಡದಲ್ಲಿ ಬೀಳುವ  ಪರಿಸ್ಥಿತಿ ಎದುರಾಗಿದೆ.  ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page