ಸಾರಿಗೆ ಪರಿಷ್ಕರಣೆ: ಪೊಲೀಸ್, ಎಂವಿಡಿ ವಿರುದ್ಧ ಕುಂಬಳೆ ಪಂ. ಅಧ್ಯಕ್ಷರಿಂದ ಗೃಹ ಸಚಿವರಿಗೆ ದೂರು; ಕುಂಬಳೆಯಲ್ಲಿ ವಿವಾದ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಪಂಚಾಯತ್ ಆಡಳಿತ ಸಮಿತಿಯ ಸಾರಿಗೆ ಪರಿಷ್ಕಾರವನ್ನು ಪೊಲೀಸ್ ಹಾಗೂ ಮೋಟಾರು ವಾಹನ ಇಲಾಖೆ ಸೇರಿ ಬುಡಮೇಲುಗೊಳಿಸು ತ್ತಿದೆಯೆಂದು ತಿಳಿಸಿ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಹಾಗೂ ಆಡಳಿತ ಸಮಿತಿ ಗೃಹಖಾತೆ ಸಚಿವ ರಮೇಶ್ ಚೆನ್ನಿತ್ತಲರಿಗೆ ದೂರು ನೀಡಿರುವುದು ಕುಂಬಳೆಯಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ದೂರು ಸ್ವೀಕರಿಸಿದ ತಕ್ಷಣ ಸಚಿವ ರಮೇಶ್ ಚೆನ್ನಿತ್ತಲ ಎಸ್‌ಪಿಗೆ ಕರೆ ಮಾಡಿ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ನಿರ್ದೇಶಿಸಿ ರುವುದಾಗಿ ಹೇಳಲಾಗುತ್ತಿದೆ. ಆದರೂ ಕ್ರಮ ಉಂಟಾಗಿಲ್ಲವೆನ್ನಲಾಗುತ್ತಿದೆ.   ಖಾಸಗಿ ಬಸ್ ನೌಕರರು ಹಾಗೂ ಆಟೋ ಕಾರ್ಮಿಕರು ಟ್ರಾಫಿಕ್ ಪರಿಷ್ಕರಣೆಗೆ ಅಡ್ಡಿಪಡಿಸುತ್ತಿರುವುದಾಗಿ ವ್ಯಾಪಾರಿ- ವ್ಯವಸಾಯಿ  ಯುವಜನ ವಿಭಾಗ ಆರೋಪಿಸುತ್ತಿದೆ.  ಕೆಲವು ದಿನಗಳ ಹಿಂದೆ ಈ ಬೇಡಿಕೆ ಮುಂದಿರಿಸಿ ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ಇವರು ಮಾರ್ಚ್ ಹಾಗೂ ಧರಣಿ ನಡೆಸಿದ್ದರು. ಇನ್ನು ಪೊಲೀಸ್ ಠಾಣೆಗೆ ಮಾರ್ಚ್ ನಡೆಸಲು ಉದ್ದೇಶಿಸಿರುವುದಾಗಿ ಹೇಳಲಾಗುತ್ತಿದೆ.

ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟ ವಿಷಯ ಹಾಗೂ ಟ್ರಾಫಿಕ್ ಪರಿಷ್ಕರಣೆ ಕುರಿತು ಚರ್ಚೆ ನಡೆಸಲು ಎರಡು ಬಾರಿ  ಕುಂಬಳೆ ಪೊಲೀಸರು ಠಾಣೆಯಲ್ಲಿ ಸಭೆ ಕರೆದಿದ್ದರು. ಕಳೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಂ.ವಿ.ಡಿ, ಕುಂಬಳೆ ಸ್ಟೇಶನ್ ಹೌಸ್ ಆಫೀಸರ್, ಕುಂಬಳೆ ಪಂಚಾಯತ್ ಪ್ರತಿನಿಧಿಗಳು, ಬಸ್ ನೌಕರರು  ಭಾಗವಹಿಸಿದ್ದರು. ಖಾಸಗಿ ಬಸ್‌ಗಳು ಹಳೆ ಬಸ್ ನಿಲ್ದಾಣ ಸಮೀಪ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ಕ್ರಮ ಕೈಗೊಳ್ಳಬೇಕೆಂಬುದು ವ್ಯಾಪಾರಿಗಳ ಬೇಡಿಕೆಯಾಗಿದೆ. ಇದೇ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬದಿಯಡ್ಕ ರಸ್ತೆಯ ಬಸ್ ಶೆಲ್ಟರ್ ಸಮೀಪ ನಿಲ್ಲಿಸುತ್ತಿರುವುದು ಹಾಗೂ ಪ್ರಯಾಣಿಕರನ್ನು ಹತ್ತಿಸುತ್ತಿರುವ ಬಗ್ಗೆ ವ್ಯಾಪಾರಿಗಳು ಪ್ರಶ್ನಿಸುತ್ತಿಲ್ಲವೆಂದೂ   ಇದು ಜನರಲ್ಲಿ ಸಂಶಯಕ್ಕೆಡೆ ಯಾಗಿರುವುದಾಗಿ ಹೇಳಲಾಗುತ್ತಿದೆ.

RELATED NEWS

You cannot copy contents of this page