ಚಾಲಕ ಬಸ್‌ನೊಳಗೆ ನೇಣು ಬಿಗಿದು ಮೃತ್ಯು

ಕಲ್ಲಿಕೋಟೆ: ಖಾಸಗಿ ಬಸ್ ಚಾಲಕ ಬಸ್‌ನ ಒಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೇರಾಂಬ್ರದಲ್ಲಿ ನಿಲುಗಡೆಗೊಳಿಸಿದ್ದ ಪೇರಾಂಬ್ರ- ವಡಗರ ರೂಟ್‌ನಲ್ಲಿ ಸಂಚರಿಸುವ ಬಸ್‌ನಲ್ಲಿ ಚಾಲಕ ಹರೀಶ್ (4೦) ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೆಲಸ ಮುಗಿಸಿ ನಿನ್ನೆ ರಾತ್ರಿ ಮನೆಗೆ ತಲುಪಲು ವಿಳಂಬವಾದ ಹಿನ್ನೆಲೆಯಲ್ಲಿ ಪತ್ನಿ ಆದಿರ ಫೋನ್ ಕರೆ ಮಾಡಿದ್ದರು. ಕೂಡಲೇ ತಲುಪುವುದಾಗಿಯೂ ಹರೀಶ್ ತಿಳಿಸಿದ್ದರು. ಆದರೆ ಬಳಿಕವೂ ಬಾರದ ಹಿನ್ನೆಲೆಯಲ್ಲಿ ಮತ್ತೆ ಫೋನ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ.

ಮುಂಜಾನೆ ಹರೀಶ್‌ರ ಸಹೋದರ ಪ್ರಜೀಶ್ ನಡೆಸಿದ ತನಿಖೆಯಲ್ಲಿ ಸಾವಿನ ಬಗ್ಗೆ ತಿಳಿದು ಬಂದಿದೆ. ಕೂಡಲೇ ಪೊಲೀಸರು, ಸ್ಥಳೀಯರು ಸೇರಿ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮೃತರು ಪತ್ನಿ, ಮಕ್ಕಳಾದ ತನ್ಮಯ, ಆಲಿಯ, ಸಹೋದರ ಪ್ರಜೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page