ಕುಂಬಳೆ ಪಂ. ಗ್ರಾಮ ಬಂಡಿಗೆ ಸಚಿವ ಆಂಟನಿ ರಾಜು ಚಾಲನೆ
ಕುಂಬಳೆ: ಕುಂಬಳೆ ಪಂಚಾಯತ್ನ ಗ್ರಾಮ ಪ್ರದೇಶಗಳ ಪ್ರಯಾಣ ಸಮಸ್ಯೆಗೆ ಪರಿಹಾರ ಕಾಣುವ ಅಂಗವಾಗಿ ಕೆಎಸ್ಆರ್ಟಿಸಿಯೊಂದಿಗೆ ಸಹಕರಿಸಿ ಗ್ರಾಮ ಪಂಚಾಯತ್ ಆರಂಭಿಸಿದ ‘ಗ್ರಾಮ ಬಂಡಿ ಸರ್ವೀಸ್’ ನ ಉದ್ಘಾಟನೆಯನ್ನು ರಾಜ್ಯ ಸಾರಿಗೆ ಖಾತೆ ಸಚಿವ ಆಂಟನಿ ರಾಜು ಇಂದು ಬೆಳಿಗ್ಗೆ ನಿರ್ವಹಿಸಿದರು. ಬಂಬ್ರಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಆಂಟನಿ ರಾಜು ಧ್ವಜ ಹಾರಿಸುವ ಮೂಲಕ ಗ್ರಾಮ ಬಂಡಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷೆ ತಾಹಿರ ಯೂಸಫ್, ಪಂ. ಸದಸ್ಯರು, ಸ್ಥಾಯೀ ಸಮಿತಿ ಅಧ್ಯಕ್ಷರು, ಜಿಲ್ಲಾ ಬ್ಲೋಕ್ ಪಂಚಾಯತ್ ಜನಪ್ರತಿನಿಧಿಗಳು ಮೊದಲಾದವರು ಭಾಗವಹಿ ಸಿದರು. ಗ್ರಾಮ ಬಂಡಿ ಯೋಜನೆಗಾಗಿ ೨೦೨೩-೨೪ನೇ ವಾರ್ಷಿಕ ಯೋಜನೆ ಯಲ್ಲಿ ೧೫ ಲಕ್ಷ ರೂಪಾಯಿ ಮೀಸಲಿರಿಸ ಲಾಗಿದೆ. ಇದಕ್ಕೆ ಜಿಲ್ಲಾ ಯೋಜನಾ ಸಮಿತಿ ಅಂಗೀಕಾರ ನೀಡಿದೆ. ಪಿ.ಕೆ ನಗರ್, ಉಳು ವಾರ್, ಪಾಂಬಾಟಿ, ಕುಂಬಳೆ ಸರಕಾರಿ ಆಸ್ಪತ್ರೆ, ಐಎಚ್ ಆರ್ಡಿ, ಪೇರಾಲ್, ಮೊಗ್ರಾಲ್ ಶಾಲೆ, ಮುಳಿಯಡ್ಕ ಎಂಬೀ ರೂಟ್ಗಳಲ್ಲಿ ಬಸ್ ಸಂಚಾರ ನಡೆಸಲಿದೆ. ಬಸ್ನ ಇಂಧನ ಖರ್ಚು ಪಂಚಾಯತ್ ಹಾಗೂ ಬಸ್ ನೌಕರರ ವೇತನ, ದುರಸ್ತಿ ಖರ್ಚುಗಳನ್ನು ಕೆಎಸ್ ಆರ್ಟಿಸಿ ವಹಿಸಿ ಕೊಳ್ಳಲಿದೆ. ಟಿಕೆಟ್ನಿಂದ ಲಭಿಸುವ ಆದಾ ಯ ಕೆಎಸ್ಆರ್ಟಿಸಿ ಗಾಗಿರುವುದು.