ಕುಂಬಳೆ ಬಸ್ ವೈಟಿಂಗ್ ಶೆಡ್ ನಿರ್ಮಾಣ ಭ್ರಷ್ಟಾಚಾರ ಆರೋಪ ಕುರಿತು ತನಿಖೆಗೆ ಒತ್ತಾಯಿಸಿ ಪಂ. ಅಧ್ಯಕ್ಷೆಯಿಂದ ಸಚಿವ, ವಿಜಿಲೆನ್ಸ್, ಡೈರೆಕ್ಟರ್‌ಗೆ ಪತ್ರ
ಕುಂಬಳೆ: ಕುಂಬಳೆ ಪಂಚಾಯತ್ ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿ ಕುಂಬಳೆ ಪೇಟೆಯಲ್ಲಿ ನಿರ್ಮಿಸಿದ ಬಸ್ ವೈಟಿಂಗ್ ಶೆಡ್‌ನ ಬಗ್ಗೆ ಭ್ರಷ್ಟಾಚಾರ ಆರೋಪ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಸಬೇ ಕೆಂದು ಒತ್ತಾಯಿಸಿ ಪಂಚಾಯತ್ ಅಧ್ಯಕ್ಷೆ ಯು.ಪಿ.ತಾಹಿರ ಯೂಸಫ್ ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್, ರಾಜ್ಯ ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಡೈರೆಕ್ಟರ್ ಮೊದಲಾದವರಿಗೆ ಪತ್ರ ಬರೆದಿದ್ದಾರೆ.
ಪೇಟೆಯ ಟ್ರಾಫಿಕ್ ಪರಿಷ್ಕರಣೆಗೆ ಸಂಬಂಧಿಸಿ ಬಸ್ ವೈಟಿಂಗ್ ಶೆಡ್ ನಿರ್ಮಾಣವನ್ನು ಅಕ್ರಡಿಟ್ ಏಜೆನ್ಸಿಯಾದ ಹ್ಯಾಬಿಟಾಟ್ ಮೂಲಕ ನಡೆಸಲಾಗುತ್ತಿದೆ. ಗ್ರಾಮ ಪಂಚಾಯತ್ ಆಡಳಿತ ಸಮಿತಿ ಸಭೆಯ ನಿರ್ಧಾರ ಪ್ರಕಾರ ಯೋಜನೆ ಜ್ಯಾರಿಗೊಳಿಸ ಲಾಗುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿ ತಲುಪುತ್ತಿರುವಂತೆ ವಿವಿಧ ಭಾಗಗಳಿಂದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವಿವಿಧ ರಾಜಕೀಯ ಪಕ್ಷಗಳು ಕೂಡಾ ಭ್ರಷ್ಟಾಚಾರ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷ ಸಚಿವಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.