ಕುಂಬಳೆ, ಮಂಜೇಶ್ವರ, ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದರ ಭೇಟಿ : ಮಂಜೇಶ್ವರದಲ್ಲಿ ಎಸ್‌ಡಿಪಿಐಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ಹಾಗೂ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನಿನ್ನೆ ಭೇಟಿ ನೀಡಿ ನಿಲ್ದಾಣಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ನಿನ್ನೆ ಮಧ್ಯಾಹ್ನ ಮಂಜೇ ಶ್ವರ ನಿಲ್ದಾಣಕ್ಕೆ ತಲುಪಿದ ಸಂಸದರ ವಿರುದ್ದ ಎಸ್.ಡಿ.ಪಿ.ಐ ಕಾರ್ಯಕರ್ತರು ಕಪುö್ಪ ಪತಾಕೆ ಯನ್ನು ತೋರಿಸಿ ಪ್ರತಿಭಟಿಸಿದರು. ರೈಲ್ವೇ ನಿಲ್ದಾಣದ ಬಗ್ಗೆ ಕಿಂಚತ್ತೂ ಗಮನ ಹರಿಸದೆ ಕೇವಲ ವೋಟ್ ಬ್ಯಾಂಕ್ ಉದ್ದೇಶದಿಂದ ಸಂಸದರು ಭೇಟಿ ವÆಡಿದ್ದಾರೆ ಎಂದು ಆರೋಪಿಸಿ ಎಸ್.ಡಿ.ಪಿ.ಐ ಕಾರ್ಯಕರು ಸಂಸದರ ವಿರುದ್ದ ದಿsಕ್ಕಾರ ಕೂಗಿಕೊಂಡು ಪ್ರತಿಭಟನೆ ನಡೆಸಿದರು. ಪೊಲೀಸರು ಬಂದೊಬಸ್ತು ಏರ್ಪಡಿಸಿದ್ದರು. ಹರ್ಷಾದ್ ವರ್ಕಾಡಿ, ಬಿ.ಎಂ ಮನ್ಸೂರ್, ಡಿ.ಎಂ.ಕೆ ಮೊಹಮ್ಮದ್, ಇರ್ಷಾದ್, ಓಂಕೃಷ್ಣ, ಲೀಗ್ ನೇತಾರರಾದ ಸೈಫುಲ್ಲ ತಂಙಳ್, ಅಜೀಜ್ ಮರಿಕೆ, ಮುಸ್ತಾಫ ಉದ್ಯಾವರ, ಫಾರೂಕ್ ಚೆಕ್ಪೋಸ್ಟ್ ಉಪಸ್ಥಿತರಿದ್ದರು. ಅಭಿವೃದ್ಧಿ ಯಲ್ಲಿ ಅತ್ಯಂತ ಹಿಂದುಳಿದ ರೈಲು ನಿಲ್ದಾಣವಾಗಿದ್ದರೂ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಂಸದರು ಇತ್ತ ತಿರುಗಿ ನೋಡಿಲ್ಲ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ. ಮೇಲ್ಸೇತುವೆ ಇಲ್ಲದ ಕಾರಣ ಈಗಾಗಲೇ ಅನೇಕ ದುಪsÄðಟನೆ ಗಳು ಸಂಭವಿಸಿದೆಯಾದರೂ ಈ ಬಗ್ಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಇತ್ತಕಡೆ ತಿರುಗಿಯೂ ನೋಡದ ಕಾರಣ ಪ್ರತಿಭಟನೆ ಅನಿವಾರ್ಯವಾಗಿತ್ತೆಂದು ನೇತಾರರು ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆಗೆ ನೇತಾರರಾದ ಅಶ್ರಫ್ ಬಡಾಜೆ, ಹಾರಿಸ್ ಉದ್ಯಾವರ, ರಿಯಾಜ್ ಕುನ್ನಿಲ್, ಮೋನುಞ ಉದ್ಯಾವರ ಹಾಗೂ ಇಬ್ರಾಹಿಂ ಮಂಜೇಶ್ವರ ನೇತೃತ್ವ ನೀಡಿದರು. ಸಂಜೆ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದರು ಭೇಟಿ ನೀಡಿ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಲೀಗ್ ನೇತಾರರಾದ ಅಜೀಜ್ ಮರಿಕೆ, ಎಂ.ಬಿ ಯೂಸಫ್, ಪಿ.ಎಂ ಸಲೀಮ್, ಅಬ್ದುಲ್ಲ ಮಾದೇರಿ, ಶಾ ಹುಲ್ ಹಮೀದ್ ಬಂದ್ಯೋಡು, ಮೊಹಮ್ಮದ್ ನಾಫಿ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಅಲಿ ಮಾಸ್ತರ್, ಅಜೀಮ್ ಮಣಿಮುಂಡ, ಕಾಂಗ್ರೆಸ್ ನೇತಾರರಾದ ಮಂಜುನಾಥ ಆಳ್ವ, ಬಾಬು ಬಂದ್ಯೋಡು, ಓಂಕೃಷ್ಣ, ಪ್ರದೀಪ್ ಶೆಟ್ಟಿ, ಆರೀಸ್ ಪಾರಕಟ್ಟೆ, ಮನ್ಸೂರ್ ಕಂಡತ್ತಿಲ್, ಮೊಹಮ್ಮದ್ ದೀನಾರ್‌ನಗರ್, ಸ್ಥಳೀಯರಾದ ಕುಟ್ಟಿಕೃಷ್ಣನ್ ಗುರುಸ್ವಾಮಿ, ಕೃಷ್ಣ ಹಾಗೂ ರೈಲ್ವೇ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಕುಂಬಳೆ ಠಾಣೆಗೆ ಭೇಟಿ ನೀಡಿದ ಸಂಸದರನ್ನು ಪಂಚಾಯತ್ ಆಡಳಿತ ಸಮಿತಿ, ಐಕ್ಯರಂಗ, ವ್ಯಾಪಾರಿ ಸಮಿತಿ ಮುಖಂಡರು, ಪ್ಯಾಸೆಂಜರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ಮೊಗ್ರಾಲ್ ದೇಶೀಯ ವೇದಿ ಕಾರ್ಯಕರ್ತರು ಸ್ವಾಗತಿಸಿದರು. ಒಂದು ಗಂಟೆ ವೇಳೆ ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಸದರು ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page