ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ನಿರ್ಮಾಣಕ್ಕೆ ಸ್ಥಾಪಿಸಿದ ಕಬ್ಬಿಣದ ಸರಳಿಗೆ ಕಾರು ಢಿಕ್ಕಿ: ಮೂವರು ಯುವಕರಿಗೆ ಗಾಯ
ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ನಿರ್ಮಾಣ ಕ್ಕಾಗಿ ಸ್ಥಾಪಿಸಿದ ಕಬ್ಬಿಣದ ಸರಳುಗಳು ದೇಹಕ್ಕೆ ನುಸುಳಿ ಕಾರು ಪ್ರಯಾಣಿಕ ರಾದ ಮೂವರು ಯುವಕರು ಗಾಯ ಗೊಂಡಿದ್ದಾರೆ. ಬೇಕಲ ಮೌವ್ವಲ್ ನಿವಾಸಿಗಳಾದ ಫಹದ್, ಶಬೀಬ್, ಅಮೀನ್ ಎಂಬಿವರು ಗಾಯಗೊಂಡವ ರಾ ಗಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಫಹದ್ ೪ ದಿನಗಳ ಹಿಂದೆ ಗಲ್ಫ್‌ನಿಂದ ಊರಿಗೆ ಬಂದಿದ್ದರು. ಇವರು ಇಂದು ಬೆಳಿಗ್ಗೆ ಸ್ನೇಹಿತರಾದ ಶಬೀಬ್ ಹಾಗೂ ಅಮೀನ್‌ರೊಂದಿಗೆ ಮಂಗಳೂರಿನತ್ತ ತೆರಳುತ್ತಿದ್ದಾಗ ೭.೩೦ರ ವೇಳೆ ಕುಂಬಳೆ ಪೇಟೆ ಸಮೀಪ ಅಪಘಾತವುಂಟಾಗಿದೆ. ಕಾರು ಕುಂಬಳೆಗೆ ತಲುಪಿದಾಗ ಡಿವೈಡರ್ ಕಾಂಕ್ರೀಟ್‌ಗಾಗಿ ಸ್ಥಾಪಿಸಿದ ಕಬ್ಬಿಣದ ಸರಳುಗಳಿಗೆ ಢಿಕ್ಕಿ ಹೊಡೆದು ಅಪಘಾತ ಉಂಟಾಗಿರುವುದಾಗಿ ತಿಳಿದುಬಂದಿದೆ. ಕಾರು ಚಲಾಯಿಸುತ್ತಿದ್ದ ಶಬೀಬ್‌ರ ಕೈಗೆ ಸರಳು ನುಸುಳಿದೆ. ಅಮೀನ್‌ರ ಕೈಗೂ ಗಾಯಗಳಾಗಿವೆ. ಫಹದ್‌ರ ಕಾಲಿನ ಎಲುಬು ಮುರಿತಕ್ಕೊಳಗಾಗಿದೆ. ಅಪಘಾತ ತಕ್ಷಣ ಸ್ಥಳಕ್ಕೆ ತಲುಪಿದ ಸ್ಥಳೀಯರು ಹಾಗೂ ಆಟೋ ಚಾಲಕರು ಸೇರಿ ಗಾಯಾಳುಗಳನ್ನು ಕುಂಬಳೆ ಜಿಲ್ಲಾಸ್ಪತ್ರೆಗೆ ತಲುಪಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಪಘಾತದಲ್ಲಿ ಕಾರು ಹಾನಿಗೀಡಾಗಿದೆ.