ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಎಂ. ಸಂಜೀವ ಶೆಟ್ಟಿ ಆಯ್ಕೆ
ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಎಂ.ಸAಜೀವ ಶೆಟ್ಟಿ ಮೊಟ್ಟೆಕುಂಜೆ ಪುನರಾಯ್ಕೆಗೊಂಡಿದ್ದಾರೆ.
ಬ್ಯಾAಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2024-29ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಂ.ಸAಜೀವ ಶೆಟ್ಟಿ ಮೊಟ್ಟೆಕುಂಜೆ, ಉಪಾಧ್ಯಕ್ಷರಾಗಿ ಎಂ. ಶ್ರೀಧರ್ ಭಟ್ರನ್ನು ಆರಿಸಲÁ ಗಿದೆ. ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜೆ ಅವರು 1995ರಿಂದಲೇ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ. ಕಳೆದ 55 ವರ್ಷಗಳ ಸುದೀರ್ಘ ಕಾಲ ಸಹಕಾರಿ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ನಿರ್ದೇಶಕರಾಗಿ ರಾಮಕೃಷ್ಣ ಭಟ್, ಜಯಪ್ರಕಾಶ್ ಶೆಟ್ಟಿ, ವೇಣುಗೋಪಾಲ ಕೆ., ನಾರಾಯಣ ಎಂ., ಹರಿನಾರಾಯಣ ಎಸ್., ಅಣ್ಣಪ್ಪ, ಜಯಂತಿ ಎಸ್. ರೈ, ಜಯಂತಿ ವಿ. ಹಾಗೂ ಸವಿತಾ ಕೆ. ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಗಣೇಶ ಪಾರೆಕm್ಟ, ಸಂಘದ ಜಿಲ್ಲಾ ವ್ಯವಸ್ಥ ಪ್ರಮುಖ್ ದಿನೇಶ್ ಕುಂಬಳೆ, ಸಹಕಾರಿ ಭಾರತಿ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ಸಹಕಾರಿ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪಟ್ಟಾಜೆ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಬಿಜೆಪಿ ಕುಂಬ್ಡಾಜೆ ಬಿಜೆಪಿ ಪಂಚಾಯತ್ ಅಧ್ಯಕ್ಷ ಹರೀಶ್ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಬಿಜೆಪಿ ಮಂಡಲ ಉಪಧ್ಯಕ್ಷ ಕೃಷ್ಣ ಶರ್ಮಾ ಜಿ., ಮಂಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಭಾಗವಹಿಸಿದರು.