ಕುಖ್ಯಾತ ಕ್ಷೇತ್ರ ಕಳ್ಳ ಸೆರೆ
ಕಣ್ಣೂರು: ಕುಖ್ಯಾತ ಕ್ಷೇತ್ರ ಕಳ್ಳ, ಪಾಡ್ಯಂ ಪತ್ತಾಯಕುನ್ನು ಪೀಠಕಂಡಿ ನಿವಾಸಿ ಎನ್. ರಿತಿಕ್ (24) ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ತಲಶ್ಶೇರಿ ಎಎಸ್ಪಿಯವರ ತಂಡ ಹಾಗೂ ಕದಿರೂರು ಪೊಲೀಸರು ಜಂಟಿಯಾಗಿ ಕಳ್ಳನನ್ನು ಬಂಧಿಸಿದ್ದಾರೆ. ಆಗಸ್ಟ್ ೫ರಂದು ಕದಿರೂರು ಚೋಲನ್ ರಯರೋತ್, ಪಯ್ಯಂಬಳ್ಳಿ ಕ್ಷೇತ್ರದಿಂದ ದೇವಿ ವಿಗ್ರಹದಲ್ಲಿ ಹಾಕಿದ್ದ ಚಿನ್ನದ ಪದಕಗಳು ಹಾಗೂ ಬೆಳ್ಳಿಯ ಸರವನ್ನು ಕಳವುಗೈದ ಆರೋಪಿಯಾಗಿದ್ದಾನೆ ಈತ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿಯುತ್ತಿರುವ ಮಧ್ಯೆ ನಿನ್ನೆ ಮುಂಜಾನೆ ಕದಿರೂರು, ಕಕ್ಕರ, ಕಿಯಾಟಿಲ್ ವೈರಿಘಾತಕ ಕ್ಷೇತ್ರದಿಂದಲೂ ಕಳವು ನಡೆದಿತ್ತು. ಪಯ್ಯಾಂಬಳಿ ಕ್ಷೇತ್ರದಲ್ಲಿ ನಡೆದ ಅದೇ ರೀತಿಯಲ್ಲಿ ಕಕ್ಕರ ಕ್ಷೇತ್ರದಿಂದಲೂ ಕಳವು ನಡೆಸಲಾಗಿತ್ತು. ಗರ್ಭಗುಡಿಯ ಬೀಗ ಮುರಿದು ಒಳನುಗ್ಗಿ ವಿಗ್ರಹಕ್ಕೆ ಹಾಕಲಾಗಿದ್ದ ಚಿನ್ನದ ಪದಕ, ಉಂಗುರವನ್ನು ಕಳವು ನಡೆಸಲಾಗಿತ್ತು. ಈ ಎರಡು ಕಳವಿನಲ್ಲೂ ಓರ್ವನೇ ವ್ಯಕ್ತಿ ಶಾಮೀಲಾಗಿರುವುದಾಗಿ ಅಂದಾಜಿಸಿ ಪೊಲೀಸರು ತನಿಖೆ ಮುಂದುವರಿಸುತ್ತಿದ್ದ ಮಧ್ಯೆ ಈತನನ್ನು ಸೆರೆ ಹಿಡಿಯಲಾಗಿದೆ.