ಕುಲಾಲ ಸಂಘದಿಂದ ಸಹಾಯಧನ ಹಸ್ತಾಂತರ
ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ, ಧಾನಿಗಳ ಸಹಕಾರ ದಿಂದ ಕುಲಾಲ ಸಮಾಜದ ನೊಂದ ಜೀವಗಳಿಗೆ ಆಸರೆ ನೀಡಲು ಹಮ್ಮಿಕೊಂಡ ಕುಲಾಲ ಆಸರೆ ಯೋಜನೆಯ ದ್ವಿತೀಯ ಸಹಾಯ ಹಸ್ತವನ್ನು ಪುತ್ತಿಗೆ ಪಂಚಾಯತ್ನ ಕುಲಾಲ ಸಂಘದ ವ್ಯಾಪ್ತಿಗೊಳಪಟ್ಟ ಮುಗು ಬೀರಿಕುಂಜೆ ನಿವಾಸಿ ಕುಂಞಿಮೂಲ್ಯರ ಚಿಕಿತ್ಸೆಗಾಗಿ ಹಸ್ತಾಂತರಿಸಲಾಯಿತು. ಈ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಕಾರ್ಯಕಾರಿಣಿ ಸಮಿತಿ ಸದಸ್ಯ ಸುಧೀರ್ ರಂಜನ್ ದೈಗೋಳಿ, ಪುತ್ತಿಗೆ ಪಂ. ಕುಲಾಲ ಶಾಖೆಯ ಸದಸ್ಯ ಬಾಬು ಬಂಗೇರ ಕಟ್ಟತ್ತಡ್ಕ, ಅಮ್ಮು ಮಾಸ್ತರ್ ಪುತ್ತಿಗೆ, ಶಾಖೆಯ ಅಧ್ಯಕ್ಷ ಕೃಷ್ಣಪ್ರಸಾದ್, ಕಾರ್ಯದರ್ಶಿ ಸತೀಶ್ ಮಾಸ್ತರ್ ಜಾಲು ಉಪಸ್ಥಿತರಿದ್ದರು.