ಕೃಷಿ ಕಾರ್ಮಿಕೆ ನಿಧನ
ಪೈವಳಿಕೆ: ತೆಂಕಮಾ ಣಿಪ್ಪಾಡಿ ನಿವಾಸಿ ಕೃಷಿ ಕಾರ್ಮಿಕೆ ಗೌರಿ (78) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರ ಪತಿ ರಾಮ ನಾಯ್ಕ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪಾರ್ವತಿ, ಜಯಲಕ್ಷ್ಮಿ, ಜನಾರ್ದನ, ಶಿವಪ್ಪ, ದೇವಕಿ, ಸೊಸೆಯಂದಿರಾದ ಲೀಲಾವತಿ, ಶಶಿಕಲ, ಅಳಿಯಂದಿರಾದ ನಾರಾಯಣ, ಅಣ್ಣು, ಸಹೋದರಿ ಪಾರ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಕ್ ಮಾಣಿಪ್ಪಾಡಿ, ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಮಾಣಿಪ್ಪಾಡಿ ಬ್ರಾಂಚ್, ಬೀಡುಬೈಲು ಬ್ರಾಂಚ್, ಭಗತ್‌ಸಿಂಗ್ ಯುವ ಕಲಾವೇದಿ ಮಾಣಿಪ್ಪಾಡಿ ಸಂತಾಪ ಸೂಚಿಸಿದರು.