ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 60 ಪವನ್ ಚಿನ್ನ ಪತ್ತೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಕಾಸರಗೋಡಿಗೆ ಸಾಗಿಸುತ್ತಿದ್ದ ಸುಮಾರು 60 ಪವನ್‌ಗೂ ಅಧಿಕ (480.9 ಗ್ರಾಂ) ಚಿನ್ನದ ಒಡವೆಗಳನ್ನು ಪತ್ತೆಹಚ್ಚಿದೆ.

ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ತಾನ ನಿವಾಸಿ ಪಗನ್‌ಲಾಲ್ ಎಂಬಾತನಿಂದ ಈ ಮಾಲು ವಶಪಡಿ ಸಲಾಗಿದೆ. ಈತ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದನು. ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಗಂಗಾಧರನ್ ನೇತೃತ್ವದ ತಂಡ ಈ ಬಸ್ಸನ್ನು ತಡೆದು ನಿಲ್ಲಿಸಿ ತಪಾಸಣೆ ಗೊಳಪಡಿಸಿದಾಗ ಈ ಮಾಲು ಪತ್ತೆಯಾಗಿದೆ. ನಂತರ ಈ ಚಿನ್ನದ ಒಡವೆಗಳನ್ನು  ಜಿಎಸ್‌ಟಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಅದರಂತೆ ಆ  ಚಿನ್ನದೊಡವೆಗಳಿಗೆ 2.60 ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಲಾಯಿತು. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಡ್ ಪ್ರಿವೆಂಟೀವ್ ಆಫೀಸರ್‌ಗಳಾದ ಪಿ.ಕೆ. ಬಾಬುರಾಜನ್, ಸಿ. ಜಯನ್, ಸಿವಿ ಲ್ ಎಕ್ಸೈಸ್ ಆಫೀಸರ್ ಟಿ. ರಾಹುಲ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page