ಪುತ್ತಿಗೆ: ಆರ್ಎಸ್ಎಸ್ ಹಿರಿಯ ಕಾರ್ಯಕರ್ತ, ಬಡಗಿಯಾಗಿದ್ದ ಪುತ್ತಿಗೆ ನಾಗೇಶ್ ಆಚಾರ್ಯ (65) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲಸದ ಮಧ್ಯೆ ತಲೆಸುತ್ತಿ ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್ಎಸ್ಎಸ್ ಪುತ್ತಿಗೆ ಶಾಖಾ ಮುಖ್ಯ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತನಾಗಿದ್ದ ಇವರ ಓರ್ವ ಪುತ್ರ ಪ್ರವೀಣ್ ಈ ಹಿಂದೆ ನಿಧನ ಹೊಂದಿದ್ದಾರೆ. ಇನ್ನೋರ್ವ ಪುತ್ರ ಕಳೆದ ದೀಪಾವಳಿ ಸಂದರ್ಭದಲ್ಲಿ ದೀಪಾಲಂಕಾರ ಮಧ್ಯೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದರು. ಮೃತರು ಪತ್ನಿ ಹೇಮಲತ, ಪುತ್ರ ಕಿರಣ್ ಕುಮಾರ್, ಸೊಸೆ ಪವಿತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






