ಓಣಂ ಸ್ಪೆಷಲ್ ಡ್ರೈವ್: ಸ್ಕೂಟರ್‌ನಲ್ಲಿ ಕರ್ನಾಟಕ ಮದ್ಯ ಸಾಗಾಟ; ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಕರ್ನಾಟಕ ಮದ್ಯ ಮಾರಾಟಗೈಯ್ಯಲು ಸ್ಕೂಟರ್‌ನಲ್ಲಿ ತಲುಪಿದ ಯುವಕ ಸೆರೆಗೀಡಾಗಿದ್ದಾನೆ.

ಮಂಜೇಶ್ವರ ಗುಡ್ಡೆಕೇರಿ ನಿವಾಸಿ ನಿತಿನ್ (30) ಸೆರೆಗೀಡಾದ ವ್ಯಕ್ತಿ. ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ನಿನ್ನೆ ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಎಯ ಬಿ.ಅಬ್ದುಲ್ಲ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಯುವಕ ಸೆರೆಗೀಡಾಗಿದ್ದಾನೆ. ಸ್ಕೂಟರ್ ಕಸ್ಟಡಿಗೆ ತೆಗೆಯಲಾಗಿದೆ. ಸ್ಕೂಟರ್‌ನಿಂದ ೮.೬೪ ಲೀಟರ್  ಕರ್ನಾಟಕ ನಿರ್ಮಿ ತ ಮದ್ಯ ವಶಪಡಿಸಲಾಗಿದೆ. ಆರೋಪಿ,  ಮದ್ಯ ಹಾಗೂ ಸ್ಕೂಟರ್ ಕುಂಬಳೆ  ರೇಂಜ್ ಅಬಕಾರಿ ಅಧಿಕಾರಿಗಳಿಗೆ ಹಸ್ತಾಂತರಿ ಲಾಗಿದೆ.  ಈ ಹಿಂದೆಯೂ ನಿತಿನ್ ಅಬಕಾರಿ ಪ್ರಕರಣದಲ್ಲಿ ಆರೋಪಿ ಯಾಗಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಆಫೀಸರ್ ಹೈಯರ್ ಗ್ರೇಡ್ ಎ ಕೆ. ದಿನೂಪ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಟಿ.ಕಣ್ಣನ್ ಕುಂಞಿ, ಪಿ.ಎ. ಕ್ರಿಸ್ಟಿನ್ ಎಂಬಿವರಿದ್ದರು.

You cannot copy contents of this page