ಕೆಐಎಫ್ಇಯುಎ ಬದಿಯಡ್ಕ ಬ್ಲೋಕ್ ಮಟ್ಟದ ಸಮ್ಮೇಳನ
ಬದಿಯಡ್ಕ: ಕೇರಳ ಐರನ್ ಫಾಬ್ರಿ ಕೇಶನ್ ಆ್ಯಂಡ್ ಎಂಜಿನಿಯರಿAಗ್ ವರ್ಕ್ ಯೂನಿಟ್ ಅಸೋಸಿಯೇಶನ್ (ಕೆಐಎಫ್ ಇಯುಎ)ಯ ಬದಿಯಡ್ಕ ಬ್ಲೋಕ್ ಮಟ್ಟದ ಸಮ್ಮೇಳನ ರಾಮಲೀಲಾ ಯೋಗಾ ಕೇಂದ್ರದಲ್ಲಿ ಜರಗಿತು. ಬ್ಲೋಕ್ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದÀÄ, ಮುಳ್ಳೇರಿಯ ಕೆಎಸ್ ಇಬಿಯ ಅಸಿಸ್ಟೆಂಟ್ ಇಂಜಿನಿಯರ್ ಫ್ರಾನ್ಸಿಸ್ ಜೋರ್ಜ್ ಉದ್ಘಾಟಿಸಿದರು. ಉದ್ಯಮಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯÁಗಿ ಪಾಲ್ಗೊಂಡಿದ್ದರು. ಸಚ್ಚಿದಾನಂದ ಬಾಯಿಕಟ್ಟೆ,ರತೀಶ್ ಶುಭಾಶಂಸನೆಗೈದರು. ಜಿಲ್ಲಾ ಕಾರ್ಯ ದರ್ಶಿ ಸುಗಧನ್ ಕೆ.ವಿ. ವರದಿ ಮಂಡಿಸಿದರು. ವಿಲ್ರೆಡ್ ಡಿಸೋಜ ಲೆಕ್ಕಪತ್ರ ಮಂಡಿಸಿದರು. ಗಂಗಾಧರ ಕೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.ನೂತನ ಪದಾದಿsಕಾರಿಗಳ ಆಯ್ಕೆ ಮಾಡಲಾಯಿತು. ರಾಮಕೃಷ್ಣ ರೈ ಅಧ್ಯಕ್ಷರÁಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಗಂಗಾಧರ ನಾಯಕ್ ಸ್ವಾಗತಿಸಿ, ನವೀನ್ ನಾಯಕ್ ಪೆರ್ಲ ವಂದಿಸಿದರು.