ಕೇಂದ್ರ ಯೋಜನೆ ಯಶಸ್ವಿ ಜಾರಿಗೆ ಬಿಜೆಪಿ ಗೆಲುವು ಅಗತ್ಯ-ನಾರಾಯಣ ಭಟ್
ಉಪ್ಪಳ: ದೇಶದ ಪ್ರತಿ ಪ್ರಜೆಯು ಕೇಂದ್ರ ಯೋಜನೆ ಗಳ ಫಲÁನುಭವಿ ಗಳು, ಕೇರಳ ಸರಕಾರ ಕೇಂದ್ರದ ಜನಪರ ಯೋಜನೆ ಗಳನ್ನು ಬುಡ ಮೇಲೂ ಗೊಳಿಸುವುದನ್ನು ನಿಲ್ಲಿಸಲು ನಮ್ಮಲ್ಲಿಯೂ ಬಿಜೆಪಿ ಅಭ್ಯರ್ಥಿ ಗಳು ಗೆಲ್ಲಬೇಕು.ಗೆಲುವು ದಾಖಲಿಸಲು ಕಾರ್ಯಕರ್ತರ ಪ್ರಯತ್ನ ಅತೀ ಅಗತ್ಯ ಎಂದು ಎನ್ಡಿಎ ಕಾಸರಗೋಡು ಲೋಕಸಭಾ ಚುನಾವಣಾ ಸಮಿತಿ ಸಂಚಾಲಕ ನ್ಯಾಯವಾದಿ ಎಂ. ನಾರಾಯಣ ಭಟ್ ಹೇಳಿದರು.
ಅವರು ನಿನ್ನೆ ಸಂಜೆ ಕೈಕಂಬ ಪಂಚಮಿ ಸಭಾಂಗಣ ದಲ್ಲಿ ಜರಗಿದ ಎನ್.ಡಿ.ಎ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಎನ್ಡಿಎ ಚುನಾವಣಾ ಮೆನೇಜ್ಮೆಂಟ್ ಸಮಿತಿಯನ್ನು ಘೋಷಣೆ ಮಾಡಿದರು.ಅರಿಬೈಲ್ ಗೋಪಾಲ್ ಶೆಟ್ಟಿ ಸಂಚಾಲಕರು ಹಾಗೂ 150 ಜನರ ಸಮಿತಿ ರಚಿಸಲಾಯಿತು. ಬಾಲಕೃಷ್ಣ ಶೆಟ್ಟಿ, ಸುರೇಶ ಪೂಕಟ್ಟೆ, ಎ.ಕೆ ಕಯ್ಯಾರ್, ವಿಜಯ್ ರೈ,ಮಣಿಕಂಠ ರೈ ಆದರ್ಶ ಬಿ ಎಂ, ಸುನಿಲ್ ಅನಂತಪುರ ಉಪಸ್ಥಿತರಿದ್ದರು. ವಸಂತ್ ಮಯ್ಯ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು.