ಕೇರಳ ಆಶಾವರ್ಕರ್ಸ್ ಸಂಘ್ ಜಿಲ್ಲಾ ಸಮ್ಮೇಳನ ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು- ಬಿಎಂಎಸ್
ಕಾಸರಗೋಡು: ಆಶಾ ಕಾರ್ಯ ಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಿ ಅರ್ಹವಾದ ಸೌಲಭ್ಯಗಳನ್ನು ನೀಡಬೇಕು ಎಂದು ಬಿಎಂಎಸ್ ಕೇರಳ ಆಶಾವರ್ಕರ್ಸ್ ಸಂಘ್ ಆಗ್ರಹಿಸಿದೆ. ಆಶಾ ಕಾರ್ಯಕರ್ತೆಯರಿಗೆ ಲಭಿಸಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡಬೇಕೆಂದು ಒತ್ತಾಯಿಸಲಾಯಿತು. ಜಿಲ್ಲಾ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಕೇರಳ ಆಶಾ ವರ್ಕರ್ಸ್ ಸಂಘ್ ಜಿಲ್ಲಾಧ್ಯಕ್ಷೆ ಜಯಲಕ್ಷ್ಮಿ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.
ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಶುಭ ಕೋರಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಿತಿಯ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ರಾಜ್ಯ ಸಮಿತಿ ಸದಸ್ಯ ಬಿ.ವಿ. ಬಾಲಕೃಷ್ಣನ್ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಯಶ್ವಂತಿ ಬೆಜ್ಜ, ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್ ಭಾಗವಹಿಸಿದರು. ಓಮನ ಮಾಧವನ್ ಸ್ವಾಗತಿಸಿ, ಗೀತಾ ಬಾಲಕೃಷ್ಣನ್ ವಂದಿಸಿದರು. ಸಮಿತಿಗೆ ಜಿಲ್ಲಾ ಅಧ್ಯಕ್ಷೆಯಾಗಿ ಜಯಲಕ್ಷ್ಮಿ ಮಂಜೇಶ್ವರ, ಪ್ರಧಾನ ಕಾರ್ಯ ದರ್ಶಿಯಾಗಿ ಗೀತಾ ಬಾಲಕೃಷ್ಣನ್, ಕೋಶಾಧಿಕಾರಿಯಾಗಿ ಸೌಮ್ಯಾ ನಾಯ್ಕ್ ಆಯ್ಕೆಯಾದರು.