ಕೇರಳ ವಿದ್ಯುತ್ ಮಜ್ದೂರ್ ಸಂಘ್ನಿಂದ ವಿದ್ಯುತ್ ಭವನ ಧರಣಿ
ಕಾಸರಗೋಡು: ಅಖಿಲ ಭಾರತ್ ವಿದ್ಯುತ್ ಮಜ್ದೂರ್ ಮಹಾಸಂಘ್ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಂದೋಲನದಂಗವಾಗಿ ಕಾಸರಗೋಡು ವಿದ್ಯುತ್ ಭವನದಲ್ಲಿ ಧರಣಿ ನಡೆಸಲಾಯಿತು. ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದಕ್ಕಿರುವ ಕೇಂದ್ರ ಕೇರಳ ಸರಕಾರಗಳ ಯತ್ನವನ್ನು ಕೊನೆಗೊಳಿಸಬೇಕು, ವಿದ್ಯುತ್ ಕಾನೂನು ತಿದ್ದುಪಡಿ ಬಿಲ್ನ ಆತಂಕಗಳನ್ನು ಪರಿಹರಿಸಬೇಕು, ಸ್ಮಾರ್ಟ್ ಮೀಟರ್ ಆತಂಕಗಳನ್ನು ಪರಿಹರಿಸಿ ಜ್ಯಾರಿಗೊಳಿಸಬೇಕು, ತಡೆಹಿಡಿದಿದ್ದ ಡಿಎ ಲೀವ್ ಸರಂಡರ್ ಸೌಲಭ್ಯ ಕೂಡಲೇ ನೀಡಬೇಕು, ಪ್ರಮೋಷನ್ ಸಮಯಾನುಸಾರ ನಡೆಸಬೇಕು, ಅನಧಿಕೃತವಾಗಿ ಕಡಿತಗೊಳಿಸಿದ ನೌಕರರನ್ನು ಪುನರ್ ಸ್ಥಾಪಿಸಬೇಕು ಮೊದಲಾದ ೧೫ ಬೇಡಿಕೆಗಳನ್ನು ಮುಂದಿಟ್ಟು ನಿನ್ನೆ ಧರಣಿ ನಡೆಸಲಾಗಿದೆ. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಎನ್. ಕೃಷ್ಣ ಕುಟ್ಟಿ ಉದ್ಘಾಟಿಸಿದರು. ಜಿಲ್ಲಾ ವರ್ಕಿಂಗ್ ಪ್ರಸಿಡೆಂಟ್ ವಸಂತ ನಾಯ್ಕ್ ಕೊರುವೈಲ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಮಡಿಕೈ, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಕೆ.ವಿ. ಬಾಬು, ದಿನೇಶನ್ ಕೆ, ಹರೀಷ್ ಕುದ್ರೆಪ್ಪಾಡಿ, ಉಪೇಂದ್ರ ಕೆ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸನ್ ಕೆ.ಎ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶಶಿಧರನ್ ಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮುರಳಿ ಟಿ ಪಿ ವಂದಿಸಿದರು.