ಕೊಯಿಪ್ಪಾಡಿ ಸಮುದ್ರ ಕಿನಾರೆಯಲ್ಲಿ ಮತ್ತೆ ಎರಡು ಬ್ಯಾರಲ್ ಪತ್ತೆ
ಕುಂಬಳೆ: ಕುಂಬಳೆ ಸಮೀಪದ ಕೊಯಿಪ್ಪಾಡಿ ಕಡಪ್ಪುರ ಸಮುದ್ರ ಕಿನಾರೆಯಲ್ಲಿ ನಿನ್ನೆ ಮತ್ತೆ ಎರಡು ಬ್ಯಾರಲ್ಗಳು ಪತ್ತೆಯಾಗಿವೆ. ಇದು ಆಳ ಸಮುದ್ರದಲ್ಲಿ ಸರಕು ಹಡಗಿನ ಕಂಟೈನರ್ಗಳಿಂದ ಬಿದ್ದು ನೀರಿನಲ್ಲಿ ತೇಲಿ ದಡ ಸೇರಿದ ಬ್ಯಾರಲ್ ಗಳಾಗಿರಬಹುದೆಂದು ಶಂಕಿಸಲಾಗುತ್ತಿದೆ. ಇದ ನೈಟ್ರಿಕ್ ಆಸಿಡ್ ಒಳಗೊಂಡಿರುವ ಬ್ಯಾರಲ್ ಎಂದು ಶಂಕಿಸಲಾಗುತ್ತಿದೆ. ಆ ಬಗ್ಗೆ ಮಾಹಿತಿ ಲಭಿಸಿದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬ್ಯಾರಲ್ಗಳನ್ನು ಅಲ್ಲಿಂದ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್ಗೆ ಸೇರಿದ ಸ್ಥಳಕ್ಕೆ ಕಂದಾಯ ಇಲಾಖೆಯ ನಿರ್ದೇಶ ಪ್ರಕಾರ ಸ್ಥಳಾಂತರಿಸಿ ಸುರಕ್ಷಿತ ಸ್ಥಳದಲ್ಲಿರಿಸಿದ್ದಾರೆ.
ಜೂನ್ ೧೫ರಂದು ಇದೇ ಸ್ಥಳದಲ್ಲಿ ಸಮುದ್ರದಿಂದ ಬ್ಯಾರಲ್ ಬಂದು ದಡಸೇರಿತ್ತು. ಅದೂ ನೈಟ್ರಿಕ್ ಆಸಿಡ್ ಹೊಂದಿರುವ ಬ್ಯಾರಲ್ ಆಗಿತ್ತು. ಅದರ ಬೆನ್ನಲ್ಲೇ ನಿನ್ನೆ ಅದೇ ಸ್ಥಳದಲ್ಲಿ ಮತ್ತೆ ಎರಡು ಬ್ಯಾರಲ್ಗಳು ತೇಲಿ ಬಂದಿವೆ.