ಗಮಕ ಶ್ರಾವಣ ಸರಣಿ ಸಮಾರೋಪ

ಕುಂಬಳೆ: ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ಈ ವರ್ಷ ನಡೆದ ಗಮಕ ಶ್ರಾವಣ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಸಭಾಂಗಣದಲ್ಲಿ ತೆಕ್ಕೆಕೆರೆ ಶಂಕರನಾರಾಯಣ ಭಟ್‌ರ ಅಧ್ಯಕ್ಷತೆಯಲ್ಲಿ ಸಮಾಪ್ತಿ ಯಾಯಿತು. ಸೇವಾಶ್ರಮದ ಸ್ಥಾಪಕ ಡಾ| ಉದಯಕುಮಾರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಡಾ| ಗೋವಿಂದ ಪ್ರಸಾದ ಕಜೆ ಗಮಕ ಕಲೆಯ ಮಹತ್ವ ಹಾಗೂ ಔಚಿತ್ಯಗಳ ಕುರಿತು ಮಾತನಾಡಿದರು. ವಿ.ಬಿ. ಕುಳಮರ್ವ ಗಮಕ ಶ್ರಾವಣ ಸರಣಿ ಕಾರ್ಯಕ್ರಮದ ಉದ್ದೇಶ ಹಾಗೂ ಹಿನ್ನೆಲೆಗಳನ್ನು ವಿವರಿಸಿದರು. ವಾಲ್ಮೀಕಿ ರಾಮಾಯಣದ ‘ಶ್ರೀ ರಾಮ ಪರಂಧಾಮ’ ಭಾಗವನ್ನು ಪ್ರಾಧ್ಯಾಪಕ ಡಾ| ಶ್ರೀಕೃಷ್ಣ ಭಟ್ ಸಣ್ಣಂಗುಳಿ ವಾಚಿಸಿದರು. ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ಪ್ರೊ| ರಘುಪತಿ ಭಟ್ ಸಸಿಹಿತ್ಲು ವ್ಯಾಖ್ಯಾನಗೈದರು. ಡಾ| ಶಾರದಾ ಸ್ವಾಗತಿಸಿ, ಗೋವಿಂದರಾಮ್ ವಂದಿಸಿದರು. ಕಲಾವಿದರನ್ನು ಗೌರವಿಸಲಾಯಿತು. ಗಣೇಶ ಪ್ರಸಾದ ಪಾಣೂರು  ಅತಿಥಿಗಳಾಗಿ, ಕಲಾವಿದರಿಗೆ ಗ್ರಂಥಗಳನ್ನು ಕಾಣಿಕೆಯಾಗಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ವಿ.ಬಿ. ಕುಳಮರ್ವ ನುಡಿನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

You cannot copy content of this page