ಗಾಂಜಾ ವಶ: ಓರ್ವ ಸೆರೆ
ಕಾಸರಗೋಡು: ಕೂಡ್ಲು ಕಲ್ಲಂಗೈಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಎಕ್ಸೈಸ್ ಆಫೀಸರ್ ಸೂರಜ್ ಎನ್.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 2.525 ಗ್ರಾಂ ಮೆಥಾಫಿಟಮಿನ್ ಮತ್ತು 6.570 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಕೊಪಾಡಿ ನಡುವಳ್ಳಂ ನಿವಾಸಿ ಮುಸಾಮ್ಮಿಲ್ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ವಿನೋದನ್ ಕೆ.ವಿ, ಇತರ ಸಿಬ್ಬಂದಿಗಳಾದ ಉಣ್ಣಿಕೃಷ್ಣನ್, ಸಾಜನ್ ಅಪ್ಸಲ್ (ಐ.ಒ) ಪ್ರಶಾಂತ್ ಕುಮಾರ್ ಎ.ವಿ. ಶ್ಯಾಮ್ಜಿತ್, ಅಮಲ್ಜಿತ್ ಸಂಶುದ್ದೀನ್, ಅನುರಾಗ್ ಮತ್ತು ಮೈಮೋಳ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.