ಚಾಲಕನ ಅಸಹಜ ಸಾವು: ಸಮಗ್ರ ತನಿಖೆಗೆ ಕಾಂಗ್ರೆಸ್ ಒತ್ತಾಯ

ಪೈವಳಿಕೆ: ಬಾಯಾರುಪದವಿನ ಲಾರಿ ಚಾಲಕ ಆಶಿಫ್‌ನ ಅಸಹಜ ಸಾವಿನ ನಿಜಾಂಶವನ್ನು ಸಾರ್ವಜನಿಕರಿಗೆ ತಿಳಿಯುವಂತೆ ಸಮಗ್ರ ತನಿಖೆ ನಡೆಸಬೇಕೆಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಒತ್ತಾಯಿಸಿದ್ದಾರೆ. ಮಧ್ಯರಾತ್ರಿಯ ಬಳಿಕ ನಡೆದಿರುವ ಈ ಘಟನೆಯ ಹಿನ್ನೆಲೆ ಬಗ್ಗೆ ಉನ್ನತ ತನಿಖೆಯಿಂದ ಮಾತ್ರ ನಿಜಾಂಶ ತಿಳಿಯಲು ಸಾಧ್ಯವಾಗಿದ್ದು, ಇದಕ್ಕಾಗಿ ಪ್ರತ್ಯೇಕ ತನಿಖಾ ತಂಡ ರಚಿಸಿ ನ್ಯಾಯಯುಕ್ತ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page